ವಿಜಯಪುರ: ಜಿಲ್ಲೆಯ ಕಾಲೇಜುಗಳಲ್ಲಿ ಮಂಗಳವಾರವೂ ಹಿಜಾಬ್-ಕೇಸರಿ ಶಾಲು ವಿವಾದ ಮುಂದುವರೆದಿದ್ದು, ಶೈಕ್ಷಣಿಕ ಕೇಂದ್ರಗಳಿಗೆ ಇದೀಗ ಪೊಲೀಸರ ಪ್ರವೇಶವೂ ಆಗಿದೆ.
ವಿಜಯಪುರ ಜಿಲ್ಲೆಯ ಇಂಡಿ, ಬಸವನಬಾಗೇವಾಡಿ, ನಿಡಗುಂದಿ ತಾಲೂಕುಗಳ ಕೆಲ ಕಾಲೇಜುಗಳಲ್ಲಿ ಸೋಮವಾರ ಕಾಲೇಜಿಗೆ ರಜೆ ಘೋಷಿಸುವ ಮಟ್ಟಕ್ಕೆ ಹೋಗಿದ್ದ ಕೇಸರಿ ಶಾಲು-ಹಿಜಾಬ್ ವಿವಾದ ಮಂಗಳವಾರವೂ ಮುಂದುವರೆದಿದೆ.
ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪಿಯು ಕಾಲೇಜಿಗೆ ಮಂಗಳವಾರವೂ ಕೇಸರಿ ಶಾಲು-ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿಗಳು-ವಿದ್ಯಾರ್ಥಿನಿಯರು ಸರ್ಕಾರ ಹೊರಡಿಸಿರುವ ಕಡ್ಡಾಯ ಆದೇಶ ಪಾಲಿಸದೇ ಕೇಸರಿ ಶಾಲು- ಹಿಜಾಬ್ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ಹಿಜಾಬ್‌ಧಾರಿಗಳಿಗೆ ಪ್ರತ್ಯೇಕ ಕೊಠಡಿ ಕೇಸರಿ ಶಾಲಿಗೂ ಪ್ರವೇಶ ಇಲ್ಲ
ಸರ್ಕಾರ ಸೂಚಿಸಿದಂತೆ ಸಮವಸ್ತ್ರ ಹಾಕಿಕೊಂಡು ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾತ್ರ ಪ್ರವೇಶ ನೀಡುತ್ತಿರುವ ಶಾಂತೇಶ್ವರ ಪಿಯು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಕಾಲೇಜು ಪ್ರವೇಶ ದ್ವಾರದಲ್ಲೇ ಕೇಸರಿ ಶಾಲು-ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ.
ಆದರೆ ಕಾಲೇಜಿನ ಹೊರ ಭಾಗದಲ್ಲಿ ನಿಂತಿರುವ ಕೇಸರಿ ಶಾಲು – ಹಿಜಾಬ್ ಹಾಕಿರುವ ವಿದ್ಯಾರ್ಥಿ ಸಮೂಹ ಉಪನ್ಯಾಸಕರು, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದು, ಪ್ರತಿಭಟನೆಗೆ ಮುಂದಾಗಿದ್ದಾರೆ.