Advertisement
ಪೊಲೀಸರ ನೈತಿಕಗಿರಿ ಖಂಡಿಸಿ ಇರಾನ್ ಮಹಿಳೆಯರು ಅಕ್ಷರಶಃ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪ್ರಮುಖ 13 ನಗರಗಳಲ್ಲಿ ಪ್ರತಿಭಟನೆಗಳು ವ್ಯಾಪಿಸಿವೆ. ಈ ವೇಳೆ ಉಂಟಾದ ಹಿಂಸಾಚಾರದಲ್ಲಿ ಪೊಲೀಸರು ಸೇರಿ ಈವರೆಗೂ 50 ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.
Related Articles
ಇಂಗ್ಲೆಂಡ್‌ನ ಲಂಡನ್‌ನಲ್ಲಿ ಇರಾನ್ ರಾಯಭಾರ ಕಚೇರಿಯ ಎದುರು ದೊಡ್ಡ ಸಂಖ್ಯೆಯ ಜನರು, ಮೆಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅನೇಕ ಪ್ರತಿಭಟನಾಕಾರು ಹಾಗೂ ಕನಿಷ್ಠ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇದೇ ವೇಳೆ 12 ಮಂದಿ ಪ್ರತಿಭಟನಾಕಾರರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ಬಾಟಲ್, ಕಲ್ಲು ಸೇರಿದಂತೆ ಇತರೆ ವಸ್ತುಗಳನ್ನು ತೂರಲಾಗಿತ್ತು.
Advertisement
ಕೇರಳದಲ್ಲಿ ಹಿಜಾಬ್ ಬೆಂಬಲಿಸಿ ಪ್ರತಿಭಟನೆಕೇರಳದ ಕಲ್ಲಿಕೋಟೆಯಲ್ಲಿ ಹಿಜಾಬ್ ಧರಿಸಿದ 11ನೇ ತರಗತಿಯ ಯುವತಿಗೆ ತರಗತಿ ಪ್ರವೇಶ ನಿರಾಕರಿಸಿದ ಕಾಲೇಜಿನ ವಿರುದ್ಧ ಮುಸ್ಲಿಂ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ. ಈ ವೇಳೆ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದಾರೆ. ಹಿಜಾಬ್‌ಗ ನಿರಾಕರಿಸಿದ ಕಾಲೇಜಿನ ಮಾನ್ಯತೆಯನ್ನೇ ರದ್ದುಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.