Advertisement
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬಾಬು ಜಗಜೀವನರಾಂ 115 ನೇ ಜಯಂತಿಯಲ್ಲಿ ಜಗಜೀವನರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮಾತನಾಡಿದ ಅವರು ಶೋಷಿತ ಸಮುದಾಯಗಳ ಅಭಿವೃದ್ದಿಗಾಗಿ ಸಿದ್ದರಾಮಯ್ಯ 28 .5 ಸಾವಿರ ಕೋಟಿ ನೀಡಿದ್ದಾರೆ. ಜೊತೆಗೆ ಆ ವರ್ಗದ ಜನರೇ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ್ದರು. ಬೊಮ್ಮಾಯಿಯವರು 28 ಸಾವಿರ ಕೋಟಿ ಘೋಷಿಸಿದ್ದಾರೆ. ಆದರೆ ಯಾರ ಉದ್ದಾರವಾಗಿದೆ. ಶೋಷಿತರ ಬದಲಿಗೆ ಉಳ್ಳವರ ಅಭಿವೃದ್ದಿಯಾಗುತ್ತಿರುವುದು ಪರಿಸ್ಥಿತಿಯ ದ್ಯೋತಕವೇ ಸರಿ ಎಂದರು.
Related Articles
Advertisement
ಇದನ್ನೂ ಓದಿ:ಈಶ್ವರಪ್ಪ ಒಬ್ಬ ದೇಶದ್ರೋಹಿ,ರಾಷ್ಟ್ರಧ್ವಜ ದ್ರೋಹಿ; ಅವರಿಗೆಲ್ಲಾ ಪ್ರತಿಕ್ರಿಯಿಸಲ್ಲ: ಡಿಕೆಶಿ
ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಲಂಚ ಕೊಡುವುದು ತಪ್ಪು. ಲಂಚಮುಕ್ತವಾಗಿ ಶೋಷಿತ ಸಮುದಾಯಗಳು ಸೌಲಭ್ಯಗಳನ್ನು ಪಡೆಯಲು ಈ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲಾ ಗ್ರಾ.ಪಂ.ಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿ, ಇತರರಿಗೂ ಅರಿವು ಮೂಡಿಸುವಂತೆ ಮನವಿ ಮಾಡಿದರು.
ಶಿಕ್ಷಕ ಜೆ.ಮಹದೇವ್, ಜಗಜೀವನರಾಂ ಜೀವನ, ಹೋರಾಟದ ಕುರಿತು ಉಪನ್ಯಾಸ ನೀಡಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸಮೀನಾ ಪರ್ವಿನ್, ಉಪಾಧ್ಯಕ್ಷ ದೇವನಾಯಕ, ಸದಸ್ಯರಾದ ಅನುಷಾ, ಸೌರಭಸಿದ್ದರಾಜು, ಆಶಾ, ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ.ತಹಸೀಲ್ದಾರ್ ಡಾ. ಅಶೋಕ್. ಇ.ಓ ಗಿರೀಶ್, ಜಿ.ಪಂ ಉಸ್ತುವಾರಿಯಾದ ನಂದಕುಮಾರ್, ಸಮಾಜಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಮುಖಂಡರಾದ ನಂದಸ್ವಾಮಿ, ನಿಂಗರಾಜಮಲ್ಲಾಡಿ, ರಾಜಪ್ಪ, ಸೇರಿದಂತೆ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.