ನವದೆಹಲಿ: ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹ ಏರಿಕೆಯಾಗಿದೆ. ಹೀಗೆಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.
2021ರ ಏ.1ರಿಂದ 2022ರ ಮಾ.31ರವರೆಗೆ ಒಟ್ಟು 38,000 ಕೋಟಿ ರೂ. ಟೋಲ್ ಮೊತ್ತವು ಫಾಸ್ಟ್ಯಾಗ್ ಮೂಲಕ ಸಂಗ್ರಹವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.67ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ಮಾಹಿತಿ ಕೊಟ್ಟಿದೆ.
ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ
ಮಾರ್ಚ್ ತಿಂಗಳಾಂತ್ಯಕ್ಕೆ ಒಟ್ಟಾರೆಯಾಗಿ 4.95 ಕೋಟಿ ಫಾಸ್ಟ್ಯಾಗ್ ಹಂಚಿಕೆ ಮಾಡಲಾಗಿದೆ. ಮಾರ್ಚ್‌ನಲ್ಲಿ ಫಾಸ್ಟ್ಯಾಗ್ ಬಳಸಿಕೊಂಡು 27 ಕೋಟಿಗೂ ಹೆಚ್ಚು ವರ್ಗಾವಣೆಯಾಗಿದ್ದು, 4,095 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಚ್‌ನಲ್ಲಿ 19.32 ಕೋಟಿ ವರ್ಗಾವಣೆ ನಡೆದಿದ್ದು, 3,086 ಕೋಟಿ ರೂ. ಸಂಗ್ರಹವಾಗಿತ್ತು.