Advertisement
ದರೆಗುಡ್ಡೆಯಲ್ಲಿರುವ ತಮ್ಮ ಫಾರ್ಮ್ ನಲ್ಲಿ ಮಾವಿನ ಗಿಡಗಳನ್ನು ನೆಟ್ಟು ಕೊಂಬೆ ಗಳನ್ನು ಲೆಕ್ಕಾಚಾರದಿಂದ ಸವರುವ ಮೂಲಕ ಒಳ್ಳೆಯ ಫಲಿತಾಂಶವನ್ನು ಕಂಡಿ ರುವ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಅವರ ಹಿರಿತನದಲ್ಲಿ ಕಾರ್ಯಕ್ರಮ ನಡೆಯಿತು.ಹೇಮಚಂದ್ರರ ಫಾರ್ಮ್ ಹೌಸ್‌ನಲ್ಲಿ ಕೃಷಿಕರನ್ನುದ್ದೇಶಿಸಿ ಜೈನ್ ಇರಿಗೇಶನ್ ಕಂಪೆನಿಯ ಬೆಂಗಳೂರು ಘಟಕದ ತಂತ್ರಜ್ಞ ಶ್ರೀನಿವಾಸ ನಾಯಕ್ ಗಿಡ ಸವರುವ ವಿಧಾನ, ಗೊಬ್ಬರ, ಔಷಧ, ಕೀಟನಾಶಕ ಬಳಕೆ ಮತ್ತು ಹೂ ಬಿಡುವ ಕಾಲದ ನಡುವೆ ಕಾಯ್ದುಕೊಳ್ಳಬೇಕಾದ ಸಮಯದ ಅಂತರ, ನೀರು ನೀಡುವ ಕ್ರಮ ಸಹಿತ ಪೋಷಣೆಯ ಕ್ರಮಗಳನ್ನು ತಿಳಿಸಿದರು.
ಗಿಡಗಳನ್ನು ಸವರುವ ಕೆಲಸ ಜೂನ್‌ನಲ್ಲಿ ಆರಂಭಿಸಿ ಜುಲೈ 15ರೊಳಗೆ ಮುಗಿಸಬೇಕು. ಸವರುವ ಪ್ರಕ್ರಿಯೆ ಆದ ತತ್‌ಕ್ಷಣ ತುಂಡರಿಸಲ್ಪಟ್ಟ ರೆಂಬೆ ಟೊಂಗೆಗಳ ತುದಿಗೆ ಬೋಡೋì ಮಿಕ್ಚರ್ ಸವರಬೇಕು. ಮಳೆ ನಿಂತ ಹೊತ್ತು ನೋಡಿಕೊಂಡು. ಸಪ್ಟಂಬರ್ ಅಕ್ಟೋಬರ್ ವೇಳೆ ಗಿಡಕ್ಕೆ “ಕಲ್ಟಾರ್’ ದ್ರವ ಕೊಡಬೇಕು. ಅದು ತುದಿಗೆ ಮುಟ್ಟಲು ಎರಡೂವರೆ ತಿಂಗಳು ಬೇಕಾಗುವ ಕಾರಣ ಆಗ ನೀರು ನಿಲ್ಲಿಸ ಬೇಕಾಗುತ್ತದೆ. ಅನಂತರ ಡ್ರಿಪ್ ಮೂಲಕ ನಿತ್ಯ ಅಥವಾ ಸ್ಪ್ರಿಂಕ್ಲರ್ ಮೂಲಕವಾದರೆ ವಾರಕ್ಕೊಮ್ಮೆ ನೀರು ಕೊಡಬೇಕು. ಬಾದಾಮಿ, ಮಲ್ಲಿಕಾ, ತೋತಾ ಪುರಿ, ಆಪೂಸ್ ಸಹಿತ ಎಲ್ಲ ಮಾವಿನ ಕಸಿಗಿಡಗಳಿಗೆ ಈ ಕ್ರಮ ಸೂಕ್ತ. ಗೇರು, ಕೊಕ್ಕೋ ಗಿಡಗಳಿಗೂ ಇದೇ ರೀತಿ ಟೊಂಗೆ ಸವರುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಜೈನ್ ಇರಿಗೇಶನ್‌ನ ಪರಿಣಿತ ಸಿಬಂದಿ ಡಿ.ಕೆ. ರವಿ ಮತ್ತು ವಿನಯಕುಮಾರ್ ಹೇಳಿದರು.
Related Articles
ಸೂರ್ಯನ ಬೆಳಕು, ಗಾಳಿ ಆಡುವಂತೆ ಮಾಡಿ ಒಟ್ಟು ಗಿಡಗಳು ಕಮಲದ ದಳಗಳಂತೆ ಗೋಚರಿಸುವಂತೆ ಮಾಡುವ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆದರೆ ಒಂದು ಎಕ್ರೆಗೆ ಈಗಿನ ದರದಲ್ಲಿ ಏನಿಲ್ಲವೆಂದರೂ ರೂ. 3 ಲಕ್ಷದಿಂದ 5 ಲಕ್ಷದ ವರೆಗೂ ಸಂಪಾದಿಸಲು ಸಾಧ್ಯವಿದೆ. ಸಾಲಿನಿಂದ ಸಾಲಿಗೆ ಎಂಟಡಿ. ಎಕ್ರೆಯಲ್ಲಿ 674 ಗಿಡಗಳು. ಆಧುನಿಕವಾಗಿ ಕೊಂಬೆರೆಂಬೆಗಳನ್ನು ಸವರುವ ಮೂಲಕ ಗಿಡ ನೆಟ್ಟ 3ರಿಂದ 5 ವರ್ಷದೊಳಗೆ ಗಿಡವೊಂದಕ್ಕೆ ಕನಿಷ್ಠ 15ರಿಂದ 20 ಕೆಜಿ ತೂಕದ ಮಾವಿನ ಫಸಲು ಪಡೆ ಯ ಬ ಹು ದು. ಒಮ್ಮೆ ಹೂಬಿಟ್ಟು ಕಾಯಾದ ರೆಂಬೆಯನ್ನು ತುಂಡರಿಸಬೇಕು.
Advertisement
ಒಟ್ಟಾರೆ ಕಾಲಂಶ ಪ್ರಮಾಣ ಬಿಟ್ಟು ಉಳಿದಂತೆ ಚಿಕ್ಕ ಪುಟ್ಟ ಟೊಂಗೆಗಳನ್ನು ಕಟ್ ಮಾಡಬೇಕು. ಗಿಡಕ್ಕೆ ಕೊಡುವ ನೀರು, ಗೊಬ್ಬರದೊಂದಿಗೆ ಹೀಗೆ ಕತ್ತರಿಸಿ ಹಾಕಿದ ಗೆಲ್ಲುಗಳೂ ಗೊಬ್ಬರವಾಗುತ್ತದೆ. ಆದರೆ ಉತ್ತಮ ಫಸಲು ಸಿಗಬೇಕಾದರೆ ರಾಸಾಯನಿಕ ಗೊಬ್ಬರ ಅಗತ್ಯವಾಗಿ ಬಳಸಬೇಕಾಗುತ್ತದೆ. ಕೀಟನಾಶಕವಾಗಿ ಸಸ್ಯಜನ್ಯ ವಸ್ತುಗಳನ್ನೂ ಬಳಸಬಹುದು ಎಂದು ಪರಿಣಿತರು ತಿಳಿಸಿದರು.