Advertisement
ಅವಳಿ ಕಟ್ಟಡರೈಲ್ವೆ ನಿಲ್ದಾಣವು 40 ಅಂತಸ್ತಿನ ಅವಳಿ ಕಟ್ಟಡವಾಗಿ ನಿರ್ಮಾಣವಾಗಲಿದೆ. ಗೋಲಾಕಾರದಲ್ಲಿರುವ ಎರಡೂ ಟವರ್‌ಗಳ ಮೇಲ್ಭಾಗವು ಗ್ಲಾಸ್‌ನಿಂದ ಕೂಡಿರ ಲಿದೆ. ನಿಲ್ದಾಣದ ಎತ್ತರ 80 ಮೀಟರ್ ಇದ್ದರೆ ಉದ್ದ 450 ಮೀಟರ್ ಇರಲಿದೆ. ಒಟ್ಟು 2.22 ಲಕ್ಷ ಚದರ ಮೀಟರ್ ಜಾಗ ದಲ್ಲಿ ನಿಲ್ದಾಣ ನಿರ್ಮಾಣ ಗೊಳ್ಳ ಲಿದ್ದು, ಈ ಪೈಕಿ 45,000 ಚ.ಮೀಟರ್ ಪ್ರದೇಶದಲ್ಲಿ ರೈಲ್ವೆ ಕಚೇರಿ ತಲೆಎತ್ತಲಿದೆ. 91 ಬಸ್ಸುಗಳು ನಿಲುಗಡೆಗೆ, 1500 ಕಾರುಗಳ ಪಾರ್ಕಿಂಗ್‌ಗೆ ಅವಕಾಶ ಸಿಗಲಿದೆ.
ಪ್ರಯಾಣ
ಸದ್ಯ ಈಗಿರುವ ರೈಲ್ವೆ ನಿಲ್ದಾಣದಲ್ಲಿ 16 ಪ್ಲಾಟ್‌ಫಾರ್ಮ್ಗಳಿದ್ದು, ಪ್ರತಿನಿತ್ಯ 2 ಲಕ್ಷದಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಹಾಗೆಯೇ ಹೊಸ ರೈಲ್ವೆ ನಿಲ್ದಾಣದಲ್ಲೂ 16 ಪ್ಲಾಟ್ ಫಾರ್ಮ್ ಗಳಿರಲಿವೆ. ಆದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಪಾದಚಾರಿ ಗಳಿಗೆ ಮಾರ್ಗ
ಇದೇ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿಗಳು ಸಾಗಲೆಂದು ವಿಶೇಷ ಸ್ಕೈ-ವಾಕ್‌ಗಳನ್ನು ಮಾಡಲಾಗುವುದು. ರೈಲ್ವೆ ನಿಲ್ದಾಣದಿಂದಲೇ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಿಕೊಡಲಾಗುವುದು.
Related Articles
Advertisement