Advertisement

ಬಿದಿರಿನಿಂದ ಹೆಚ್ಚು ಆದಾಯ

12:22 PM Sep 18, 2018 | Team Udayavani |

ಯಲಹಂಕ: ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ ಎಂದು ಬೆಂಗಳೂರು ಗಾಂಧಿಕೃಷಿ ವಿಶ್ವವಿದ್ಯಾಲಯದ  ಕುಲಪತಿ ಡಾ.ಎಂ.ಎಸ್‌.ನಟರಾಜು ಹೇಳಿದರು. ವಿಶ್ವ ಬಿದಿರು ದಿನದ ಪ್ರಯುಕ್ತ ಜಿಕೆವಿಕೆ ಆವರಣದಲ್ಲಿ 5 ಬಿದಿರು ಹೊಸ ತಳಿಗಳ 250ಕ್ಕೂ ಹೆಚ್ಚು ಗಿಡಗಳನ್ನು ಪ್ರಾತ್ಯಕ್ಷಿತಾ ತಾಣದಲ್ಲಿ ನೆಟ್ಟು ಮಾತನಾಡಿ, ಬೀಳು ಬಿಟ್ಟ ಜಾಗದಲ್ಲಿ ರೈತರು ಬಿದಿರು ಕೃಷಿ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಬಹುದು ಎಂದರು.

Advertisement

ಬಿದಿರು ರೈತರಿಗೆ ಆದಾಯ ತರುವ ಜತೆ ಜತೆಗೆ ನಶಿಸಿ ಹೋಗುತ್ತಿರುವ ಗುಡಿಕೈಗಾರಿಕೆ ಹಾಗೂ ಬುಡಕಟ್ಟುr ಜನಾಂಗದ ಆರ್ಥಿಕ ಸ್ಥಿತಿ ಸುಧಾರಿಸಬಲ್ಲ ಕಲ್ಪವೃಕ್ಷವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ  ಬಿದಿರು ಸೊಸೈಟಿಯ ಸದಸ್ಯ ಡಾ.ಚಿದಾನಂದ್‌ ಮಾತನಾಡಿ. ಬಿದಿರು ಬೆಳೆಯಲು ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಹೆಕ್ಟೇರ್‌ಗೆ 30 ಸಾವಿರ ಸಹಾಯಧನ ನೀಡುತ್ತಿದೆ. ಜೊತೆಗೆ ನಾಟಿ ಮಾಡಲು ಅಗತ್ಯ  ಬಿದಿರನ್ನು ಪೂರೈಸುತ್ತದೆ.

ಹವಾಮಾನಕ್ಕನುಗುಣವಾಗಿ ಬೇರೆ ಬೇರೆ ತಳಿಗಳನ್ನು ಬೆಳೆಯಬಹುದು. ಏಕ ಬೆಳೆಯಾಗಿ ಬೆಳೆಯಬಹುದಾದರೆ 5.5ಮೀಟರ್‌ ಅಂತರದಲ್ಲಿ ಬಿದಿರನ್ನು ನಾಟಿ ಮಾಡಬೇಕು. ನಾಟಿ ಮಾಡಿದ 4 ವರ್ಷಗಳನಂತರ ಕಟಾವು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಬಂಬೂ ಮಿಷನ್‌ ಕಚೇರಿ ಸಂಪರ್ಕಿಸಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ, ರಿಜಿಸ್ಟಾರ್‌ ಡಾ. ಎ.ಬಿ.ಪಾಟೀಲ್‌, ಕೃಷಿ ಶಿಕ್ಷಣ ನಿರ್ದೇಶಕರಾದ ಡಾ.ರಾಜೇಂದ್ರ ಪ್ರಸಾದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next