Advertisement

ಅಧಿಕಾರಿಗಳ ವರ್ತನೆಗೆ ಹೈ ಛೀಮಾರಿ

11:54 AM Jun 13, 2018 | |

ಬೆಂಗಳೂರು: ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಕೋರ್ಟ್‌ ಆದೇಶ ಪಾಲಿಸದ ಸರ್ಕಾರ ಹಾಗೂ ಆಡಳಿತ ವರ್ಗಕ್ಕೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದೆ.

Advertisement

ನಿವೇಶನ ಹಂಚಿಕೆಗೆ ಸಂಬಂಧಪಟ್ಟಂತೆ ಏಕಸದಸ್ಯ ಪೀಠದ ಆದೇಶ ಉಲ್ಲಂ ಸಿದ ಆರೋಪ ಕುರಿತು ಎಸ್‌.ಎನ್‌.ನರಸಿಂಹಮೂರ್ತಿ ಎಂಬುವವರು ಬಿಡಿಎ ಆಯುಕ್ತರ ವಿರುದ್ಧ ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ರಾಘವೇಂದ್ರ ಚೌಹಾಣ್‌ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರಿಗೆ ನಿವೇಶನ ನೀಡುವಂತೆ ನಿರ್ದೇಶಿಸಿದ್ದ ಆದೇಶ ಉಲ್ಲಂಘನೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಬಳಿಕವೂ ಆದೇಶ ಪಾಲಿಸದ ಬಿಡಿಎ ಕಾರ್ಯವೈಖರಿಯನ್ನು ತರಾಟೆ ತೆಗೆದುಕೊಂಡಿತು. 

ಕೋರ್ಟ್‌ ಆದೇಶಕ್ಕೆ ಆಡಳಿತ ವರ್ಗ ಬೇಜವಾಬ್ದಾರಿ ತನ ತೋರಿದ್ದು, ಅಧಿಕಾರಿಗಳು ಮತ್ತೆ ಮತ್ತೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೋರ್ಟ್‌ ಆದೇಶ ಉಲ್ಲಂ ಸುವ ಆಡಳಿತ ವರ್ಗಕ್ಕೆ ನಾಚಿಕೆಯಾಗಬೇಕು ಎಂದು ನ್ಯಾಯಪೀಠ ಕಿಡಿಕಾರಿತು.

ನ್ಯಾಯಾಂಗ ನಿಂದನೆ ಕೇಸ್‌ಗಳು ದಾಖಲಾಗುತ್ತವೆ ಎಂದರೆ ಆಡಳಿತ ವರ್ಗದ ಕಾರ್ಯವೈಖರಿ ಹೇಗೆದೆ ಎಂದು ತಿಳಿಯುತ್ತದೆ. ಈ ಪ್ರಕರಣದ ಮುಂದಿನ ವಿಚಾರಣೆ ವೇಳೆ ಬಿಡಿಎ ಆಯುಕ್ತರು ಖುದ್ದು ಹಾಜರಾಗಿ, ಸ್ಪಷ್ಟನೆ ನೀಡಬೇಕು ನ್ಯಾಯಮೂರ್ತಿಗಳು ಎಂದು ವಿಚಾರಣೆಯನ್ನು ಜೂ. 18ಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next