Advertisement
ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿವೆ. ಇದರಲ್ಲಿ ಎಂಜಿನಿಯರ್‌ಗಳು ಮುಖ್ಯವಾಗಿರುತ್ತಾರೆ. ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಎಂಜಿನಿಯರ್ ಗಳು ಅವಶ್ಯಕತೆ ಇರುವುದರಿಂದ ಎಂಜಿನಿಯರಿಂಗ್ ಆದ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಆ ಬಳಿಕ ಲೆಕ್ಕ ವಿಭಾಗ, ಆಡಳಿತ ವಿಭಾಗ, ಯೋಜನಾ ವಿಭಾಗ ಸಹಿತ ಹಲವು ವಿಭಾಗಗಳಿವೆ. ಆ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗವಾಕಾಶ ಹೆಚ್ಚಿದೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸುವ ಗೋಜಿಗೆ ಯುವಜನತೆ ಹೋಗುವುದಿಲ್ಲ,
ಲೋಕೋಪಯೋಗಿ ಇಲಾಖೆಯ ವಿವಿಧ ವಿಭಾಗದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಾಮಾನ್ಯವಾಗಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪರೀಕ್ಷೆ ನಡೆಯುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ವಿಶೇಷ ನಿಯಮ ರೂಪಿಸಿ ಇಲಾಖೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಇದರಂತೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಯಾವ ಹುದ್ದೆ, ಎಷ್ಟು ಖಾಲಿ ಇದೆ ಎಂಬುದಾಗಿ ಅಧಿಸೂಚನೆ ಹೊರಡಿಸುತ್ತದೆ. ಬಳಿಕ ನಿಗದಿತ ಸಮಯದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಕಳುಹಿಸಲು ಸೂಚಿಸಿರುತ್ತದೆ. ಲಿಖಿತ ಪರೀಕ್ಷೆ ಇರುತ್ತದೆ. ಇದರಲ್ಲಿ ನಿಗದಿತ ಅಂಕಗಳ ಎರಡು ಪತ್ರಿಕೆಗಳ ಪರೀಕ್ಷೆ ಇರುತ್ತದೆ. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಹಾಗೂ ನಿಗದಿತ ಹುದ್ದೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ಬಳಿಕ ನೇರ ಸಂದರ್ಶನ ಎದುರಿಸಬೇಕಾಗುತ್ತದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಸೇರಿಸಿ ಅಂಕ ನಿರ್ಧರಿತವಾಗುತ್ತದೆ. ಇವೆಲ್ಲವನ್ನೂ ಎದುರಿಸಿ ಅರ್ಹನೆಂದು ಪರಿಗಣಿಸಲ್ಪಟ್ಟ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ.
Related Articles
Advertisement
ವಿವಿಧ ವಿಭಾಗಗಳಲ್ಲಿ ಉದ್ಯೋಗ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರಿಂಗ್ ಹೊರತುಪಡಿಸಿ ವಿವಿಧ ವಿಭಾಗಗಳಿವೆ. ಹಾಗಾಗಿ ಎಂಜಿನಿಯರ್‌ಗಳಿಗೆ ಮಾತ್ರ ಉದ್ಯೋಗ ಎನ್ನುವ ಯೋಚನೆ ಬೇಡ. ಆದರೆ ವಿವಿಧ ಇಲಾಖೆಗಳಿಗೆ ಅರ್ಜಿ ಆಹ್ವಾನಿಸುವ ಸಮಯಕ್ಕಾಗಿ ಕಾಯಬೇಕು. ಸರಕಾರಿ ಇಲಾಖೆ ವೆಬ್‌ಸೈಟ್ ಗಳನ್ನು ಯಾವಾಗಲೂ ಪರೀಕ್ಷಿಸುತ್ತಿರಬೇಕು.
– ವಿನೋದ್, ಅಧಿಕಾರಿ,
ಪಿಡಬ್ಲ್ಯೂಡಿ ಇಲಾಖೆ ಪ್ರಜ್ಞಾ ಶೆಟ್ಟಿ