ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಹೆಚ್ಚು ಕಾಲ ಉಳಿಯುವುದು ಅನಿವಾರ್ಯವಾದ್ದರಿಂದ ದೇಶಾದ್ಯಂತ ಅಡುಗೆ ಮನೆಯಲ್ಲಿ ಬಳಸುವ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆಯಂತೆ!
ಮನೆಯಿಂದ ಹೊರಗೆ ಹೋಗಲು ಹಿಂಜರಿಯುವ ಹಾಗೂ ಮನೆಯಲ್ಲಿಯೇ ಹೊಸ ಅಡುಗೆ ತಯಾರಿಯ ಪ್ರಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಮುಖ ಅಡುಗೆ ಉಪಕರಣಗಳು ಅವರಿಗೆ ಉಪಯುಕ್ತ ಸಾಧನವಾಗಿದೆ.
ಭಾರತದ ಇಕಾಮರ್ಸ್ ಮಾರುಕಟ್ಟೆ ಫ್ಲಿಪ್‌ಕಾರ್ಟ್‌ನ ಒಳನೋಟಗಳ ಪ್ರಕಾರ, ಎಲೆಕ್ಟ್ರಿಕ್ ತಂದೂರ್, ಹ್ಯಾಂಡ್ ಬ್ಲೆಂಡರ್, ವೇಫಲ್ ಮೇಕರ್, ಪಿಜ್ಜಾ ಮೇಕರ್, ಪಾಪ್‌ಕಾರ್ನ್ ಮೇಕರ್, ಹತ್ತಿ ಕ್ಯಾಂಡಿ ಮೇಕರ್ ಸೇರಿದಂತೆ ಅಡುಗೆ ಸಲಕರಣೆಗಳ ಬೇಡಿಕೆ ಮೊದಲ ಬಾರಿಗೆ ಶೇ. 200ಕ್ಕಿಂತ ಹೆಚ್ಚಾಗಿದೆಯಂತೆ!
ಇದನ್ನೂ ಓದಿ:ರಾಜ್ಯದಲ್ಲಿ ಯಾವುದೇ ಲಾಕ್ ಡೌನ್, ಕರ್ಪ್ಯೂ ಇಲ್ಲ: ಸರ್ಕಾರದ ಸ್ಪಷ್ಟನೆ
ಈ ಸಮಯದಲ್ಲಿ, ರೆಫ್ರಿಜರೇಟರ್‌ಗಳು, ಜ್ಯೂಸರ್ ಮಿಕ್ಸರ್ ಗ್ರೈಂಡರ್, ಒಟಿಜಿಗಳು ಸೇರಿದಂತೆ ಸಾಮಾನ್ಯ ಅಡುಗೆ ಸಲಕರಣೆಗಳ ಬೇಡಿಕೆಯಲ್ಲಿ ಶೇ.52ರಷ್ಟು ಹೆಚ್ಚಳವಾಗಿದೆ. ಮಹಾನಗರಗಳಿಂದ ಈ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದರೆ, 2 ಹಾಗೂ 3ನೇ ಶ್ರೇಣಿಯಪಾಲು ಶೇ.55ರಷ್ಟುಏರಿಕೆಯಾಗಿದೆ.
ಈ ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ವಾರ್ಷಿಕ ಆಧಾರದ ಮೇಲೆ ದುಪ್ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ಹೊಸ ಅಡಿಗೆ ಉಪಕರಣಗಳಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಸಂಖ್ಯೆಯ ಬ್ರ್ಯಾಂಡ್‌ಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಇದು ನಾಸಾದ ನೂತನ ತಂತ್ರಜ್ಞಾನ… ಗಾಳಿ ಇಲ್ಲದ ಟೈರುಗಳು…ಬಳಸುವಿರೇನು?
ಗುಂಟೂರು, ಕೊಟ್ಟಾಯಂ, ಅಗರ್ತಲಾ, ಕೇಚರ್, ಮದಿನಿಪುರ, ಮುಜಾಫರ್‌ಪುರ್, ಭಾಗಲ್ಪುರ ಮತ್ತು ಬಂಕುರಾ ನಗರಗಳು ಭಾರೀ ಬೇಡಿಕೆ ಹೊಂದಿರುವ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿವೆ. ಮಹಾನಗರಗಳ ಪೈಕಿ ಬೆಂಗಳೂರು ವಿಭಾಗವೊಂದರಲ್ಲೇ ಶೇ.79ರಷ್ಟು ಬೆಳವಣಿಗೆಯನ್ನು ಕಂಡಿದೆ.
ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಫ್ಲಿಪ್‌ಕಾರ್ಟ್ ಅಡುಗೆ ಸಲಕರಣೆಗಳ ವ್ಯಾಪಕ ಆಯ್ಕೆಯನ್ನು ಹೊಂದಿದೆ. ಈ ಉತ್ಪನ್ನಗಳು ಗ್ರಾಹಕರಿಗೆ ವೇಗವಾಗಿ ಅಡುಗೆ ಮಾಡಲು ಸಹಾಯ ಮಾಡುತ್ತದೆ. ಹೊಸ ಪಾಕಪದ್ಧತಿಗಳೊಂದಿಗೆ ಹೊಸತನವನ್ನು ಮತ್ತು ಆರೋಗ್ಯಕರ ಆಹಾರ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ.