Advertisement

ಕಿಡ್ನಿ ಕಸಿಗೆ ಅವಕಾಶ ನೀಡದ್ದಕ್ಕೆ ಹೈ ಕೋರ್ಟ್‌ ಮೊರೆ

12:01 PM Apr 14, 2018 | Team Udayavani |

ಬೆಂಗಳೂರು: ಸಂಬಂಧಿಕರೊಬ್ಬರು ಸ್ವಇಚ್ಛೆಯಿಂದ ಕಿಡ್ನಿದಾನ ಮಾಡಲು ಬಂದರೂ ಅದನ್ನು ಪಡೆಯಲು ಅನುಮತಿ ನಿರಾಕರಿಸಿದ ಆರೋಗ್ಯ ಇಲಾಖೆಯ ಕ್ರಮ ಪ್ರಶ್ನಿಸಿ 48 ವರ್ಷದ ರೈತರೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾ. ರಾಘವೇಂದ್ರ ಚೌಹಾಣ್‌ ಅವರಿದ್ದ  ಏಕಸದಸ್ಯ ಪೀಠ, ಬಡ ರೈತರಾಗಿರುವ ಅರ್ಜಿದಾರರು ಹಲವು ವರ್ಷಗಳಿಂದ ಅನುಮತಿಗಾಗಿ ಪರದಾಡುತ್ತಿದ್ದಾರೆ.

Advertisement

ಈ ಪ್ರಕರಣವನ್ನು ಮಾನವೀಯ ನೆಲೆಗಟ್ಟಿನಲ್ಲಿಯೂ ನೋಡಬೇಕಾಗುತ್ತದೆ. ಹೀಗಾಗಿ, ಅರ್ಜಿದಾರರಿಗೆ “ಕಿಡ್ನಿ’ ಕಸಿಗೆ ಅನುಮತಿ ನೀಡುವ ಬಗ್ಗೆ ಸ್ಪಷ್ಟ ನಿಲುವು ತಿಳಿಸುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿ ಏಪ್ರಿಲ್‌ 17ಕ್ಕೆ ವಿಚಾರಣೆ ಮುಂದೂಡಿತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ  ರೈತ 2013ರಲ್ಲಿ ಡೆಂ  ಜ್ವರಕ್ಕೆ ಒಳಗಾಗಿ, ಎರಡೂ ಕಿಡ್ನಿ ವೈಫ‌ಲ್ಯಕ್ಕೆ ತುತ್ತಾಗಿದ್ದರು.

ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ ಚಿಕಿತ್ಸೆ ಪಡೆದುಕೊಂಡೇ ದಿನ ದೂಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಪತ್ನಿಯ ಸಂಬಂಧಿಕ ಮಹಿಳೆಯೊಬ್ಬರು ಸ್ವ ಇಚ್ಛೆಯಿಂದ ಒಂದು ಕಿಡ್ನಿದಾನ ಮಾಡಲು ಒಪ್ಪಿಕೊಂಡಿದ್ದರು. ಅಗತ್ಯ ದಾಖಲೆಯನ್ನೂ ನೀಡಿದ್ದರು ಆದರೆ ದಾಖಲೆ ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next