ಆರೋಗ್ಯವಂತ ವ್ಯಕ್ತಿಯ ಕೊಲೆಸ್ಟ್ರಾಲ್ ಪ್ರಮಾಣ 125 ಎಂ.ಜಿ.ಯಿಂದ 200ರಷ್ಟಿರಬೇಕಂತೆ. ಇದಕ್ಕಿಂತ ಕಡಿಮೆ ಆದರೂ ಸಮಸ್ಯೆಯೇ…
ಪ್ರತಿ ಮನುಷ್ಯನಿಗೂ ಕೊಲೆಸ್ಟ್ರಾಲ್ ಬೇಕು. ಅದು ದೇಹದಲ್ಲಿ ಇರಬೇಕು. ಕೊಲೆಸ್ಟ್ರಾಲ್ ಇಲ್ಲದೇ ಹೋದರೆ, ಟೆಸ್ಟೊಸ್ಟಿರೋನ್, ಇಸ್ಟ್ರೋಜಿನ್, ಅಡ್ರೆನಾಲ್ ಹಾರ್ಮೋನ್‌ಗಳು ಉತ್ಪತ್ತಿಯಾಗೋಲ್ಲ. ದೇಹಕ್ಕೆ ವಿಟಮಿನ್ ಡಿ , ಪಿತ್ತರಸಗಳನ್ನು ಸಪ್ಲೆ„ ಮಾಡೋದೇ ಕೊಲೆಸ್ಟ್ರಾಲ್ ಆದರೆ, ಈ ಕೊಲೆಸ್ಟ್ರಾಲ್ ಜಾಸ್ತಿಯಾದರೆ ಬಹಳ ಕಷ್ಟ. ನೇರ ಹೃದಯಕ್ಕೇ ಗುನ್ನ. ಇವನಿಗೆ ಜಾಸ್ತಿ ಕೊಬ್ಬು ಅಂತಾರಲ್ಲ, ಅದೇ ಇದು.
ಕೊಬ್ಬು ಅಂದರೆ ಮತ್ತೇನಿಲ್ಲ; ಕೊಲೆಸ್ಟ್ರಾಲ್ ಹೀಗಾಗಿ, ಕೊಲೆಸ್ಟ್ರಾಲ್ ಬಗ್ಗೆ ಸ್ವಲ್ಪ ಗಮನ ಕೊಡುವುದು ಲೇಸು. ಸಾಮಾನ್ಯವಾಗಿ, ಆರೋಗ್ಯವಂತ ವ್ಯಕ್ತಿಯ ಕೊಲೆಸ್ಟ್ರಾಲ್ ಪ್ರಮಾಣ 125 ಎಂ.ಜಿ.ಯಿಂದ 200ರಷ್ಟಿರಬೇಕಂತೆ. ಇದಕ್ಕಿಂತ ಕಡಿಮೆ ಆದರೂ ಸಮಸ್ಯೆಯೇ. ಕೊಲೆಸ್ಟ್ರಾಲ್ ನಿಯಂತ್ರಣ ಮಾಡೋಕೆ ನಾನಾ ದಾರಿಗಳಿವೆ. ಮೊದಲು ಬೆಳ್ಳುಳ್ಳಿ ಬಳಸಿ. ಇದರಲ್ಲಿ ಅಮಿನೋ ಆ್ಯಸಿಡ್, ವಿಟಿಮಿನ್‌ಗಳು ಇವೆ. ಇದು ದೇಹದಲ್ಲಿ ಎಲ್‌ಡಿಎಲ್ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗೇನೇ, ಎಚ್‌ಡಿಎಲ್ ಪ್ರಮಾಣ ಸಿಕ್ಕಾಪಟ್ಟೆ ಏರಲು ಬಿಡೋದಿಲ್ಲ. ರಕ್ತದಲ್ಲಿ ಇಂಗಾಲದ ಪ್ರಮಾಣ ನುಗ್ಗಲು ಬಿಡೋದಿಲ್ಲ. ಹೀಗಾಗಿ, ಬೆಳ್ಳುಳ್ಳಿಯನ್ನು ನೇರವಾಗಿಯೋ, ಪರೋಕ್ಷವಾಗಿಯೋ ಬಳಸುತ್ತಿರುವುದು ಒಳಿತು.
ಗ್ರೀನ್ ಟೀ ಕುಡಿಯುವ ಮೂಲಕವೂ ಕೊಲೆಸ್ಟ್ರಾಲ್ ಅನ್ನು ಕಂಟ್ರೋಲ್ ಮಾಡಬಹುದು. ಕಾರಣ, ಇದರಲ್ಲಿ ಫೋನಿಲೋಸ್ ಅಂಶ ಇದೆ. ಹೀಗಾಗಿ, ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿದರೆ ಕೊಬ್ಬನ್ನು ಹತೋಟಿಯಲ್ಲಿಡಲು ಸಾಧ್ಯ. ಅಡುಗೆಗೆ ಮೆಂತ್ಯ ಬಳಸೋದನ್ನು ಮರೆಯಬೇಡಿ. ಮೆಂತ್ಯದಲ್ಲಿ ವಿಟಮಿನ್ ಇ ಹೆಚ್ಚಾಗಿ ಇದೆ. ದೇಹ ದಲ್ಲಿನ ಕೊಬ್ಬನ್ನು ಕರಗಿಸಲು, ಇದಕ್ಕಿಂತ ಒಳ್ಳೆಯ ಮನೆ ಮದ್ದು ಇಲ್ಲ. ಇದರಲ್ಲಿರುವ ಫೈಬರ್ ಅಂಶ, ಕೊಬ್ಬನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ. ಹಾಗಾಗಿ, ಆಹಾರದಲ್ಲಿ ದಿನವೂ ಒಂದು ಅಥವಾ ಎರಡು ಸ್ಪೂನ್ ಮೆಂತ್ಯ ಬಳಸಿದರೆ, ಕೊಬ್ಬು ಕಡಿಮೆಯಾಗುತ್ತದೆ.