ಉಡುಪಿ: ಕರಾವಳಿ ಬೈಪಾಸ್ ಜಂಕ್ಷನ್ ಸಮೀಪ ಇರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ “ಹಾರ್ಲೆ ಡೇವಿಡ್ ಸನ್ ಎಕ್ಸ್440′ ಬೈಕ್ ಶನಿವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಪ್ರಥಮ ಗ್ರಾಹಕರಾದ ಶಯಾನ್ ಕ್ರಾಸ್ತಾ, ನಿತ್ಯಾನಂದ ಕೇಶವ ಮೇಸ್ತ, ರೋಲ್ಸನ್ ಡಿ’ ಅಲ್ಮೇಡಾ ಅವರಿಗೆ ಶಕ್ತಿ ಮೋಟರ್ಸ್ ಮ್ಯಾನೇಜಿಂಗ್ ಡೈರೇಕ್ಟರ್ ವಿಜಯ್ ಕರ್ಣೆ ಬೈಕ್‌ನ ಕೀ ಹಸ್ತಾಂತರಿಸಿದರು.
ಹೀರೋ ಸಂಸ್ಥೆ ಜತೆಗೆ ಹಾರ್ಲೆ ಡೇವಿಡ್‌ಸನ್ ಒಗ್ಗೂಡುವಿಕೆಯೊಂದಿಗೆ ಟಾಪ್ ಮಾಡೆಲ್‌ನಲ್ಲಿ ಎಸ್-ವೇರಿಯೆಂಟ್, ವಿವಿಡ್ ಮತ್ತು ಡೆನಿಮ್ ಸಹಿತ ಒಟ್ಟು ಮೂರು ಶ್ರೇಣಿಗಳಲ್ಲಿ ಬೈಕ್‌ಗಳನ್ನು ಉತ್ಪಾದಿಸಲಾಗಿದೆ. ಸದ್ಯ ಈ ಮೂರು ಶ್ರೇಣಿಯಲ್ಲಿ ಹಾರ್ಲೆ ಡೇವಿಡ್‌ಸನ್ ಎಕ್ಸ್ 440 ಲಭ್ಯವಿದೆ.
ಬೈಕ್‌ನ ಬೆಲೆ ಎಕ್ಸ್ ಶೋರೂಂ 2.39 ಲಕ್ಷ ರೂ. ಟಾಪ್ ಮಾಡೆಲ್ ಗೆ 2.79 ಲಕ್ಷ ರೂ ಆಗಲಿದೆ.ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಮತ್ತು ಸರ್ವಿಸಿಂಗ್‌ಇರುತ್ತದೆ. ಈಗಾಗಲೆ ಬುಕಿಂಗ್ ಪ್ರಾರಂಭವಾಗಿದ್ದು, ಒಂದು ತಿಂಗಳ ಒಳಗೆ ಗ್ರಾಹಕರಿಗೆ ಬೈಕ್ ನೀಡಲಾಗುವುದು ಶೋರೂಂ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಈಗಾಗಲೆ 30ಕ್ಕೂ ಅಧಿಕ ಬುಕಿಂಗ್ ಗಳಾಗಿದ್ದು, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮೊದಲ ಮೂರು ಗ್ರಾಹಕರಿಗೆ ಇಂದು ಬೈಕ್ ಗಳನ್ನು ಹಸ್ತಾಂತರಿಸಿದ್ದೇವೆ. ಹೀರೋ ಶಕ್ತಿ ಮೋಟಾರ್ಸ್‌ನಲ್ಲಿ ವಿವಿಧ ಮಾದರಿಯ ಅತ್ಯಾಧುನಿಕ ಬೈಕ್‌ಗಳಿವೆ. ಮುಂದಿನ ದಿನಗಳಲ್ಲಿ ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಬೇಡಿಕೆಯ ದ್ವಿಚಕ್ರ ವಾಹನಗಳನ್ನು ಜಿಲ್ಲೆಗೆ ಪರಿಚಯಿಸಲಾಗುವುದು ಎಂದು ಸಂಸ್ಥೆಯ
ಮಾಲಕ ವಿಜಯ್ ತಿಳಿಸಿದ್ದಾರೆ.
ಎಚ್-ಡಿ ಎಕ್ಸ್ 440 ಸಿಂಗಲ್ ಸಿಲಿಂಡರ್ ಹಾರ್ಲೆ-ಡೇವಿಡ್‌ಸನ್ ಮರುರೂಪಿ ಸಲಾಗಿದೆ. ನಿಸ್ಸಂದಿಗ್ಧ ಶಕ್ತಿ, ವೇಗವುಳ್ಳ ಸಾಮರ್ಥ್ಯ ಇದರ ವಿಶೇಷ. 440 ಆಯಿಲ್ ಕೂಲ್ಡ್ ಎಂಜಿನ್, ಕ್ಲಾಸಿಕ್ ರೆಟ್ರೊ ವಿನ್ಯಾಸ ಇದರ ವೈಶಿಷ್ಟ್ಯ . 6-ಸ್ಪೀಡ್ ಟ್ರಾನ್ಸಿಷನ್ ಗೇರಿಂಗ್ ಹೈವೇ ಕ್ರೂಸಿಂಗ್ ಮತ್ತು ನಗರ ಪ್ರಯಾಣಕ್ಕಾಗಿ ವ್ಯವಸ್ಥಿತ ಆರಮದಾಯಕ ಚಾಲನೆಗೆ ತಕ್ಕಂತೆ ರೂಪುಗೊಂಡಿದೆ ಎಂದು
ಶೋರೂಂನ ವ್ಯವಸ್ಥಾಪಕ ರಾಹುಲ್ ಮೀರಜ್‌ಕರ್ ತಿಳಿಸಿದ್ದಾರೆ.