ನವದೆಹಲಿ: ವಾಹನ ಖರೀದಿಸುವವರಿಗೆ ಸ್ಕೋಡಾ ಇಂಡಿಯಾ (Skoda India) ವರ್ಷಾಂತ್ಯದ ಹಿನ್ನೆಲೆಯಲ್ಲಿ ಭರ್ಜರಿ ಆಫರ್ ನೀಡಿದೆ. ಹೌದು 2024ರ ಏಪ್ರಿಲ್ ನಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ 3ನೇ ಜನರೇಶನ್ ನ Superb Sedanಗೆ (Completely build unit) ಬರೋಬ್ಬರಿ 18 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದೆ.
ಅದೇ ರೀತಿ Luxury Sedan (ಲಕ್ಸುರಿ ಸೆಡಾನ್) ಬೆಲೆಯನ್ನು 54 ಲಕ್ಷ ರೂಪಾಯಿಯಿಂದ ಅಂದಾಜು 36 ಲಕ್ಷ ರೂಪಾಯಿಗೆ ಇಳಿಕೆ ಮಾಡಿರುವುದಾಗಿ ಸ್ಕೋಡಾ ತಿಳಿಸಿದೆ. ಕೆಲವೊಂದು ಮಾರಾಟವಾಗದ ವಾಹನಗಳು ಖರೀದಿಗೆ ಲಭ್ಯವಿದ್ದು, ಈ ಡಿಸ್ಕೌಂಟ್ಸ್ ಸೀಮಿತ ಅವಧಿಯವರೆಗೆ ಮಾತ್ರ ಎಂದು ತಿಳಿಸಿದೆ.
ನಾಲ್ಕನೇ ಜನರೇಶನ್ ನ ಸ್ಕೋಡಾ ಸೂಪರ್ಬ್ 2023ರ ನವೆಂಬರ್ ನಲ್ಲಿ ಜಾಗತಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. Skoda ಬ್ರ್ಯಾಂಡ್ ನ ಡಿಸೈನ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಐಕಾನಿಕ್ ಸ್ಕೋಡಾ ಕಾರು ವಾಷರ್ಸ್ ಜತೆಗೆ ಪೂರ್ಣಪ್ರಮಾಣದ ಎಲ್ ಇಡಿ ಹೆಡ್ ಲೈಟ್ಸ್ ಹೊಂದಿದೆ. ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರೊಂದಿಗೆ 18 ಇಂಚಿನ ಸ್ಟೈಲಿಷ್ ಚಕ್ರಗಳು, ಡೈನಾಮಿಕ್ ಟರ್ನ್ ಇಂಡಿಕೇಟರ್ಸ್ ಹೊಂದಿದೆ.
2024ರಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಸ್ಕೋಡಾ ಸೂಪರ್ಬ್ ನಲ್ಲಿ ಆರಾಮದಾಯಕ ಪ್ರಯಾಣಕ್ಕಾಗಿ ಹಲವು ಅಪ್ ಗ್ರೇಡ್ಸ್ ಅಳವಡಿಸಲಾಗಿತ್ತು. ಇದರಲ್ಲಿ 10.2 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ ಮತ್ತು 9.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಫೀಚರ್ಸ್ ಅನ್ನು ಹೊಂದಿದೆ.