Advertisement
ಇನ್ನು ಬಿಡುಗಡೆಯಾಗಿರುವ ಈ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ಮಾಪಕ ರಿಷಭ್ ಶೆಟ್ಟಿ, “ಚಿತ್ರದ ಪ್ರಮೋಶನ್ ಭಾಗವಾಗಿ ಸದ್ಯ ಮೊದಲ ಹಾಡನ್ನು ರಿಲೀಸ್ ಮಾಡಿದ್ದೇವೆ. ಈ ಹಾಡಿಗೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ಸಲ ಹಾಡು ಕೇಳಿದಾಗ ಓ.ಕೆ ಅನಿಸುತ್ತಿದೆ. ಅದೇ ಹಾಡನ್ನ ಎರಡು -ಮೂರು ಸಲ ಕೇಳಿದಾಗ ಅಡಿಕ್ಷನ್ ಆಗುತ್ತದೆ ಎಂದು ಹಾಡನ್ನು ಕೇಳಿದವರು ಹೇಳುತ್ತಿದ್ದಾರೆ. ಒಂದೊಳ್ಳೆ ಹಾಡನ್ನು ಕೊಟ್ಟಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ.
Related Articles
Advertisement
“ರಿಷಭ್ ಶೆಟ್ಟಿ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಹೀರೋ’ ಚಿತ್ರದಲ್ಲಿ ರಿಷಭ್ ಶೆಟ್ಟಿ ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಭರತ್ ರಾಜ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಹಾಡುಗಳ ಮೂಲಕ ಸಿನಿ ಪ್ರಿಯರ ಗಮನ ಸೆಳೆಯುತ್ತಿರುವ “ಹೀರೋ’ ಹೇಗಿರಲಿದ್ದಾನೆ ಅನ್ನೋದು ಮಾರ್ಚ್ ಮೊದಲ ವಾರ ಗೊತ್ತಾಗಲಿದೆ