Advertisement
ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಪಾರಂಪರಿಕ ವೈದ್ಯ ಗುರುಕುಲದ ವಾರ್ಷಿಕೋತ್ಸವ, ಜಾನಪದ ಸರ್ಟಿμಕೇಟ್ ಕೋರ್ಸ್ ಸಮಾರೋಪದಲ್ಲಿ ಮಾತನಾಡಿದ ಅವರು, ಅನಾದಿ ಕಾಲದಿಂದ ಚಾಲ್ತಿಯಲ್ಲಿರುವ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನ ಅನುಸರಿಸುವ ಮೂಲಕ ಪ್ರತಿಯೊಬ್ಬರು ತಾವೇ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು ಎಂದು ಆಶಿಸಿದರು.
Related Articles
Advertisement
ಹಣಕ್ಕೆ ಹೆಚ್ಚಿನ ಮಾನ್ಯತೆ ನೀಡದೆ ಸೇವೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಪವಿತ್ರ ಪಂಚವಟಿ ವನಕ್ಕೆ ಚಾಲನೆ ನೀಡಿದ ಲಿಂಗರಾಜು ನಡುಮನಿ ಮಾತನಾಡಿ, ಪಂಚವಟಿ ವನ ಎಂದರೆ ಹತ್ತಿ, ಬಿಲ್ವಪತ್ರೆ, ಬನ್ನಿ, ಅರಳಿ, ಬೇವು ಮರಗಳನ್ನ ಒಂದೇ ಕಡೆ ಬೆಳೆಸುವುದು. ಪೂಜೆಗೆ ಬಳಸುವ ಬಿಲ್ವಪತ್ರೆಯಲ್ಲಿ ಹೃದ್ರೋಗ ಸಮಸ್ಯೆ ದೂರ ಮಾಡುವ ಶಕ್ತಿ ಇದೆ.
ಮಹಿಳೆಯರ ಮಾಸಿಕ ಮುಟ್ಟಿನ ಸಮಸ್ಯೆ ನಿವಾರಣೆ ಇತರೆ ಸಮಸ್ಯೆ ದೂರ ಮಾಡುವ ಶಕ್ತಿ ಬನ್ನಿಯಲ್ಲಿದೆ. ಬೇವು ಬಳಸುವುದರಿಂದ ಚರ್ಮದ ಸಮಸ್ಯೆ ದೂರ ಮಾಡಬಹುದು. ವೃಕ್ಷರಾಜ ಎಂದೇ ಕರೆಯಲ್ಪಡುವ ಅರಳಿಯಿಂದ ಮೂತ್ರಕೋಶ ಸಮಸ್ಯೆ ದೂರ ಮಾಡಬಹುದು. ಹತ್ತಿ ಹಣ್ಣು ತಿನ್ನುವುದರಿಂದ ಕಣ್ಣಿನ ಬೆಳಕು ಹೆಚ್ಚಿಸಬಹುದು ಎಂದು ತಿಳಿಸಿದರು.
ಈವರೆಗೆ ಶಾಲಾ-ಕಾಲೇಜು ವಿವಿಧೆಡೆ 200 ಪವಿತ್ರ ಪಂಚವಟಿ ವನ ನಿರ್ಮಾಣ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಪವಿತ್ರ ಪಂಚವಟಿ ವನ ಅಭಿಯಾನ ಪ್ರಾರಂಭಿಸುವ ಚಿಂತನೆ ಇದೆ. ಪಾರಂಪರಿಕವೈದ್ಯಕೀಯ ಪರಿಷತ್ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರ ನಿರ್ದೇಶಕ ಡಾ| ಟಿ.ಎನ್. ದೇವರಾಜ್ ಮಾತನಾಡಿ, ಅತಿ ಪ್ರಾಚೀನವಾದ ಪಾರಂಪರಿಕ ವೈದ್ಯ ಪದ್ಧತಿಯನ್ನ ಪುನರ್‌ಜೀjವನಗೊಳಿಸುವ ಮಹತ್ತರ ಉದ್ದೇಶದಿಂದ ಪಾರಂಪರಿಕ ವೈದ್ಯಕೀಯ ಪರಿಷತ್ 9 ತಿಂಗಳ ಜಾನಪದ ಸರ್ಟಿμಕೇಟ್ ಕೋರ್ಸ್ ಪ್ರಾರಂಭಿಸಲಾಗಿದೆ. ಈ ಪದ್ಧತಿಯನ್ನ ಮುಂದುವರೆಸುವ ಮೂಲಕ ಎಲ್ಲರಿಗೂ ಅನುಕೂಲ ಮಾಡಬೇಕು ಎಂದು ತಿಳಿಸಿದರು.
ಪರಿಷತ್ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಅಧ್ಯಕ್ಷತೆ, ಇರಕಲ್‌ನ ಜಗದ್ಗುರು ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಶಿವಮೂರ್ತಪ್ಪ, ಜೆ. ಮಹಾದೇವಯ್ಯ ಇತರರು ಇದ್ದರು. ಪುಷ್ಪಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಮತಾ ನಾಗರಾಜ್ ಸ್ವಾಗತಿಸಿದರು. ಪಂಕಜಾ ವಿ. ರಾಜು ನಿರೂಪಿಸಿದರು.