Advertisement
ಕೊನೆ ಕ್ಷಣದವರೆಗೂ ಉಭಯ ಆಭ್ಯರ್ಥಿಗಳಲ್ಲೂ (ಕಾಂಗ್ರೆಸ್- ಪ್ರಮೋದ್ ಮಧ್ವರಾಜ್, ಬಿಜೆಪಿ- ರಘುಪತಿ ಭಟ್) ಆತಂಕ ಮಡು ಗಟ್ಟಿತ್ತು. ಇಬ್ಬರೂ ಕಾಲೇಜಿನಲ್ಲಿ ಸಹಪಾಠಿ ಗಳೇ. ಆದರೆ ಇಲ್ಲಿ ಪ್ರತಿಸ್ಫರ್ಧಿ ಗಳು. ಈ ಆತಂಕ ಮತ ಎಣಿಕೆಯ ಅಂತ್ಯದವರೆಗೂ ಮುಂದುವರಿಯಿತು. ಎಲ್ಲೂ ಇದೇ ಫಲಿತಾಂಶ ಎಂದು ಬೆನ್ನು ಹಾಕಿ ಹೋಗಲು ಅವಕಾಶ ಕೊಡಲೇ ಇಲ್ಲ. ವಿಚಿತ್ರವೆಂದರೆ ಕಾಂಗ್ರೆಸ್‌ಗೆ ಜಿಲ್ಲೆ ಯಲ್ಲಿ ಹೆಚ್ಚು ನಂಬಿಕೆ ಇದ್ದಿದ್ದ ಕ್ಷೇತ್ರವಿದಾಗಿತ್ತು.
ಮೊದಲ ಸುತ್ತಿನಲ್ಲಿ ಪ್ರಮೋದ್ ಮಧ್ವ ರಾಜ್ 4,898 ಹಾಗೂ ರಘುಪತಿ ಭಟ್ 5,172 ಮತಗಳನ್ನು ಗಳಿಸಿದರು. ಆಗ ದೊಡ್ಡದೆನಿಸಲಿಲ್ಲ. ಇನ್ನೂ ಮೊದ ಲನೇ ರೌಂಡ್ ಎಂದುಕೊಳ್ಳಲಾಯಿತು. 2ನೇ ಸುತ್ತಿನಲ್ಲೂ ಭಟ್ಟರಿಗೆ 190 ಮತಗಳ ಲೀಡ್ ಸಿಕ್ಕಿತು (4,982-5,172). ಆಗಲೂ ಸಿಕ್ಕಿದ್ದು 190 ಮತಗಳ ಲೀಡ್. ಮೂರನೇ ಸುತ್ತು ಮುಗಿದಾಗಲೂ ಭಟ್ ಅವರ ಮುನ್ನಡೆ 940 ಮತ ಗಳಷ್ಟೇ. 4ನೇ ಸುತ್ತಿನಲ್ಲಿ ಪ್ರಮೋದ್ 4,234 ಹಾಗೂ ಭಟ್ 5,358 ಮತಗಳನ್ನು ಪಡೆದಾಗ ಲೀಡ್ ಅಂತರ 2,064ಕ್ಕೇರಿತು. ಆದರೆ 5ನೇ ಸುತ್ತಿನಲ್ಲಿ ಇದು 1,902ಕ್ಕೆ ಇಳಿಯಿತು. 6ನೇ ಸುತ್ತಿನಲ್ಲಿ ಪ್ರಮೋದ್‌ರಿಗೆ 5,171 ಮತ್ತು ಭಟ್ 3,509 ಮತ ಸಿಕ್ಕಿತು. ಇದು ಭಟ್ ಅವರನ್ನು ದಿಗಿಲುಗೊಳಿಸಿತು. ಯಾಕೆಂದರೆ, ಇದ್ದಕ್ಕಿದ್ದಂತೆ ಲೀಡ್ ಅಂತರ 240ಕ್ಕೆ ಕುಸಿಯಿತು. ಏಳನೇ ಸುತ್ತು ಇನ್ನೂ ಅಪಾಯ. 141ಕ್ಕೆ ಇಳಿಕೆ. ಅದುವರೆಗೆ ಬಿಜೆಪಿ ಪರ ಘೋಷಣೆ ಕೂಗುತ್ತಿದ್ದವರೆಲ್ಲಾ ಮೌನಕ್ಕೆ ಶರಣು ಹೋದರು. ಇನ್ನೇನು ಅತ್ಯಂತ ನಿಕಟ ಸ್ಪರ್ಧೆಯಾಗಿ ಮರು ಎಣಿಕೆಯೂ ನಡೆಯಬಹುದೆಂಬ ಲೆಕ್ಕಾಚಾರವೂ ಆರಂಭವಾಯಿತು.
Related Articles
ಆದರೆ ಎಂಟನೇ ಸುತ್ತು ಭಟ್ ಅವರ ಆತಂಕ ವನ್ನು ಕೊಂಚ ನಿವಾ ರಿಸಿತು. ಪ್ರಮೋದ್ 4,478 ಮತ ಗಳನ್ನು ಪಡೆದರೆ ಭಟ್ 5,584 ಮತ ಗಳನ್ನು ಪಡೆದು 1, 247 ಕ್ಕೆ ಅಂತರ ಏರಿತು. 9ನೇ ಸುತ್ತಿನಲ್ಲಿ 2,694ಕ್ಕೆ, 10ನೇ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿಗೆ ಕೊಂಚ ಸಮಾ ಧಾನ. ಆ ಸುತ್ತಿನಲ್ಲಿ ಪ್ರಮೋದ್ ಕೇವಲ 3,549 ಮತಗಳನ್ನು ಪಡೆದರೆ, ಭಟ್‌ರಿಗೆ 6,144. ಮುನ್ನಡೆಯ ಅಂತರ 5,289. ಇದು ಭಟ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಗಳಿಗೆ. ಈ ಸುತ್ತುಗಳು ನಗರ ಭಾಗದ ಮತಗಟ್ಟೆಗಳದ್ದು. ಆಗಲೇ ಬಿಜೆಪಿಯ ಸಂಭ್ರಮಾಚರಣೆ ಶುರು ವಾಯಿತು. ನಿರೀಕ್ಷೆಯಂತೆಯೇ ಅನಂತರದ ಯಾವ ಸುತ್ತುಗಳೂ ಭಟ್ ಅವರನ್ನು ಕೈ ಬಿಡಲಿಲ್ಲ. 17ನೇ ಸುತ್ತು, ಅಂಚೆ ಮತಗಳು ಸೇರಿದಂತೆ ಒಟ್ಟು 12,044 ಮತಗಳ ಅಂತರದಿಂದ ರಘುಪತಿ ಭಟ್ ಜಯಶಾಲಿಯಾದರು.
2008ರಲ್ಲಿ ರಘುಪತಿ ಭಟ್ ಅವರು ಪ್ರಮೋದ್ ಮಧ್ವರಾಜ್ ವಿರುದ್ಧ 2,479 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 2013ರಲ್ಲಿ ಸ್ಪರ್ಧಿಸಿರ ಲಿಲ್ಲ. ಆಗ ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟಿ ಅವರನ್ನು ಪ್ರಮೋದ್ 39,524 ಮತಗಳ ಅಂತರದಿಂದ ಸೋಲಿಸಿ ಸಚಿವ ಸ್ಥಾನವನ್ನೂ ಪಡೆದಿದ್ದರು.
Advertisement
ಬಿಜೆಪಿಗೆ ಪಕ್ಕಾ ಸುಳಿವು ಸಿಕ್ಕಿತ್ತೇ?ಜಿಲ್ಲೆಯ ಎಲ್ಲಾ 5 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಮಾತನ್ನು ಬಿಜೆಪಿ ಮುಖಂಡರು ಮತ ಎಣಿಕೆಯ ಮುನ್ನಾದಿನ ಹೇಳಿದ್ದರು. ಮಾಧ್ಯಮದ ಜತೆಗೆ ಭಟ್ ಮಾತನಾಡುತ್ತಾ “ಉಳ್ಳಾಲ ಒಂದು ಕ್ಷೇತ್ರ ಹೊರತುಪಡಿಸಿ ಕರಾವಳಿಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ’ ಎಂದಿದ್ದರು. ಆ ಹೇಳಿಕೆ ನೂರಕ್ಕೆ ನೂರರಷ್ಟು ನಿಜವಾಗಿದೆ. - ಸಂತೋಷ್ ಬೊಳ್ಳೆಟ್ಟು