Advertisement

ಫ‌ಲಪುಷ್ಪ ಪ್ರದರ್ಶನದಲ್ಲಿ ಹೇಮಾವತಿ ಡ್ಯಾಂ ಆಕರ್ಷಣೆ

09:37 AM Jan 27, 2019 | Team Udayavani |

ಹಾಸನ: ನಗರದ ಎಸ್‌ಜೆಪಿ ಪಾರ್ಕ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಿರ್ಮಿ ಸಿರುವ ಫ‌ಲ-ಪುಷ್ಪ ಪ್ರದರ್ಶನದಲ್ಲಿ ಕೆಂಪು, ಬಿಳಿ ಗುಲಾಬಿಯಲ್ಲಿ ನಿರ್ಮಿಸಿರುವ ಗೊರೂರಿನ ಹೇಮಾವತಿ ಜಲಾಶಯ ಕ್ರಸ್ಟ್‌ ಗೇಟ್‌ಗಳಿಂದ ನೀರು ನದಿಗೆ ಧುಮುಕುವ ಕಲಾಕೃತಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Advertisement

ಆಕರ್ಷಕ ಮಾದರಿಗಳು: ಜೈ ಜವಾನ್‌ – ಜೈ ಕಿಸಾನ್‌ ಪರಿಕಲ್ಪನೆಯಲ್ಲಿ ರೂಪುಗೊಂಡಿ ರುವ ಫ‌ಲ ಪುಷ್ಪ ಪ್ರದರ್ಶನದಲ್ಲಿ ಹೇಮಾವತಿ ಅಣೆಕಟ್ಟು, ಅದರ ಪರಿಸರದಲ್ಲಿನ ರೈತರ ಕಲಾಕೃತಿಗಳು, ವಾಘಾ ಬಾರ್ಡರ್‌ ವಿವಿಧ ಬಣ್ಣದ ಹೂಗಳಿಂದ ಕಂಗೊಳಿಸುತ್ತಿವೆ. ಹುಲ್ಲಿನಿಂದ ತಯಾರಿಸಿರುವ ಯುದ್ಧ ನೌಕೆಗಳು, ಬಂಕರ್‌ಗಳು, ಆಧುನಿಕ ಮಾದರಿಯ ಫ್ಲೈ ಓವರ್‌, ಕೆಎಸ್‌ಆರ್‌ಟಿಸಿ ಮಳಿಗೆಯಲ್ಲಿ ಸ್ವಯಂ ಚಾಲಿತ ಬಸ್‌ ಮಾದರಿಗಳೂ ಆಕರ್ಷಕವಾಗಿವೆ.

ಕೃಷಿ, ತೋಟಗಾರಿಕಾ ಇಲಾಖೆ ಸÖ ಯೋಗ: ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಫ‌ಲಪುಷ್ಪ ಪ್ರದರ್ಶನದಲ್ಲಿ ವಸ್ತು ಪ್ರದರ್ಶನವನ್ನೂ ಆಯೋಜನೆ ಮಾಡಲಾಗಿದೆ. ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿ ಸಿದ್ದು, ರೈತರಿಗೆ ಅಗತ್ಯವಿರುವ ಯಂತ್ರೋಪಕರಣಗಳು, ರಸಗೊಬ್ಬರಗಳು, ಔಷಧಿಗಳು ಪ್ರದರ್ಶನ ಮಳಿಗೆಯಲ್ಲಿವೆ. ರೈತರು ತಾವು ಬೆಳೆದ ವಿವಿಧ ಬೆಳೆಗಳನ್ನು ಪ್ರದರ್ಶಿಸಿದ್ದಾರೆ.

ತೋಗಾರಿಕೆ ಇಲಾಖೆಯ ಅಂಗ ಸಂಸ್ಥೆ ನರ್ಸರಿ ಮ್ಯಾನ್‌ ಕೋ- ಆಪರೇಟೀವ್‌ ಸೊಸೈಟಿ, ವಿವಿಧ ಮಾದರಿಯ ಹೂವಿನ ಗಿಡಗಳು, ಆಲಂಕಾರಿಕ ಗಿಡಗಳ ಮಾರಾಟದ ವ್ಯವಸ್ಥೆಯನ್ನೂ ಮಾಡಿದೆ. ಭಾನುವಾರ ಮತ್ತು ಸೋಮವಾರವೂ ಫ‌ಲ ಪುಷ್ಪ ಪ್ರದರ್ಶನವಿದ್ದು, ಪ್ರತಿದಿನ ಸಂಜೆ 6 .30 ರಿಂದ 8.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next