Advertisement

ಸಹಾಯ ಮಾಡುವುದೇ ನಿಜ ಧರ್ಮ

05:46 PM May 10, 2020 | Suhan S |

ಹುಣಸೂರು: ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂದು ಡಿವೈಎಸ್‌ಪಿ ಸುಂದರ್‌ರಾಜ್‌ ಹೇಳಿದರು.

Advertisement

ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಬೆಳಕು ಸೇವಾ ಸಂಸ್ಥೆಯ ಮಕ್ಕಳಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿ ಮಾತನಾಡಿ, ತಂದೆ- ತಾಯಿ ಕಳೆದುಕೊಂಡ ತಬ್ಬಲಿ ಮಕ್ಕಳಿಗೆ ಆಶ್ರಯ ನೀಡಿ, ಶಿಕ್ಷಣ ನೀಡುತ್ತಿರುವ ಬೆಳಕು ಸೇವಾ ಸಂಸ್ಥೆಯ ನಿಂಗರಾಜ್‌ ಮಲ್ಲಾಡಿ ಮತ್ತು ಅವರ ಸಂಗಡಿಗರು ಅಭಿನಂದನಾರ್ಹರು. ಇಂತಹ ಮಕ್ಕಳು ಲಾಕ್‌ಡೌನ್‌ ನಿಂದ ಆಹಾರ ಇಲ್ಲದೆ ಸಂಕಷ್ಟದಲ್ಲಿರುವ ವಿಷಯ ಗಮನಕ್ಕೆ ಬಂದಾಗ ಮೈಸೂರಿನ ಸ್ನೇಹಿತರಾದ ದೀಪಕ್‌, ಯಶವಂತ್‌, ಗುರುರವರಿಗೆ ವಿಷಯ ತಿಳಿಸಿ ಸಂಸ್ಥೆ ಮಕ್ಕಳಿಗೆ ಅಗತ್ಯ ಆಹಾರ ಕಿಟ್‌ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹಸಿದವರಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದು ಮಾನವೀಯತೆ. ಬೆಳಕು ಸೇವಾಸಂಸ್ಥೆ ಹಲವು ವರ್ಷಗಳಿಂದ ತಬ್ಬಲಿ ಮಕ್ಕಳಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದರು. ದಾನಿಗಳಾದ ದೀಪಕ್‌, ಯಶವಂತ್‌, ಗುರು, ಮುಖಂಡರಾದ ಜಯಣ್ಣ, ಮಹದೇವ, ವೆಂಕಟರಮಣ, ಸಂಸ್ಥೆಯ ನಿಂಗರಾಜ್‌ ಮಲ್ಲಾಡಿ, ಶೈಲಿನ್‌ ಮನು, ನಗರಸಭಾ ಸದಸ್ಯ ರಮೇಶ್‌ ಡೊಡ್ಡಹೆಜೂರ್‌, ದಲಿತ ಮುಖಂಡರಾದ ಬಸವಲಿಂಗಯ್ಯ, ಸಂತೋಷ್‌, ಕಿರಣ, ಅರುಣ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next