Advertisement

ಹೆಜಮಾಡಿ: ಒಳರಸ್ತೆಗೂ ಸುಂಕ !ನವಯುಗ ಹುನ್ನಾರಕ್ಕೆ ಸ್ಥಳೀಯರಿಂದ ತಡೆ

12:28 PM May 01, 2017 | |

ಪಡುಬಿದ್ರಿ: ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನಗಳಿಂದ ಸುಂಕ ಸಂಗ್ರಹ ಮಾಡುತ್ತಿರುವ ನವಯುಗ್‌ ಕಂಪೆ‌ನಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಹೆದ್ದಾರಿಗೆ ಸಮಾನಾಂತರವಾಗಿರುವ ಹೆಜಮಾಡಿ ಒಳರಸ್ತೆ(ಹಳೇ ಎಂಬಿಸಿ ರಸ್ತೆ)ಗೂ ರವಿವಾರ ಗೇಟ್‌ ಅಳವಡಿ ಸಲು ಹೊರಟಿದೆ.  ಆದರೆ ತತ್‌ಕ್ಷಣ ಚುರುಕಾದ ಸ್ಥಳೀಯರು ಈ ಯತ್ನವನ್ನು ತಡೆದಿದ್ದಾರೆ.

Advertisement

ಹಿಂದೆ ಹೆದ್ದಾರಿಯಲ್ಲಿ ಗೇಟ್‌ ಅಳವಡಿಸುವಾಗಲೇ ಸ್ಥಳೀಯರು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಯಾವುದೇ ಕಾರಣಕ್ಕೂ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಉಡುಪಿ ಜಿಲ್ಲೆಯ ವಾಹನಗಳಿಗೆ ಸಂಪೂರ್ಣ ವಿನಾಯಿತಿ ಘೋಷಿಸ ಲಾಗಿತ್ತು. ಕಳೆದ ವಾರ ಉಡುಪಿ ಜಿಲ್ಲೆಯ ವಾಹನಗಳಿಗೆ ಟೋಲ್‌ ಸಂಗ್ರಹಕ್ಕೆ ಅಣಿಯಾಗಿದ್ದರೂ ಪ್ರತಿ ಭಟನೆಗೆ ಹೆದರಿ ಆರಂಭಿಸಿರಲಿಲ್ಲ. ಇದೀಗ ನವಯುಗ್‌ ಕಂಪೆನಿಯ ಕಣ್ಣು ಒಳರಸ್ತೆಯಲ್ಲಿ ಸಾಗುವ ವಾಹನಗಳ ಮೇಲೆ ಬಿದ್ದಿದೆ !

ಪೂರ್ವಮಾಹಿತಿ ನೀಡದೆ ರವಿ ವಾರ ಹೆಜಮಾಡಿ ದಾಬಾ ಬಳಿ ಒಳರಸ್ತೆಗೆ ಟೋಲ್‌ ಅಳವಡಿಸಲು ಕಾಮಗಾರಿ ಆರಂಭಿಸಿದ ತತ್‌ಕ್ಷಣ ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯ ಕಬೀರ್‌, ಹೋರಾಟ ಸಮಿತಿಯ ಅಧ್ಯಕ್ಷ ಗುಲಾಮ್‌ ಮೊಹಮ್ಮದ್‌ ಆಗಮಿಸಿ ಕಾಮಗಾರಿಗೆ ತಡೆ ಮಾಡಿದ್ದಾರೆ.

ಕಂಪೆನಿ ನಡೆಯನ್ನು ರಾಜ್ಯ ಪಂಚಾಯತ್‌ ಸದಸ್ಯರ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಖಂಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಪ್ರತಿಭಟನೆ
ಹೆಜಮಾಡಿ ಟೋಲ್‌ ವಿರೋಧಿ ಹೋರಾಟ ಸಮಿತಿಯು ಸಾರ್ವಜ ನಿಕರು ಮತ್ತು ವಿವಿಧ ಸಂಘ- ಸಂಸ್ಥೆಗಳೊಂದಿಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ಟೋಲ್‌ಗೇಟ್‌ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಗುಲಾಮ್‌ ಮೊಹಮ್ಮದ್‌ ತಿಳಿಸಿದ್ದಾರೆ. ಕಾನೂನುಬಾಹಿರವಾಗಿ ಕಾಮಗಾರಿ ಆರಂಭಿಸಿದ ನವಯುಗ್‌ ಕಂಪೆನಿ ವಿರುದ್ಧ ಮೊಕದ್ದಮೆ ದಾಖಲಿಸುವಂತೆಯೂ ಅವರು ಆಗ್ರಹಿಸಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next