ನವಿ ಮುಂಬಯಿ: ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾದ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ವಿಜಯ್ ಬಿ. ಹೆಗ್ಡೆ ಅವರು ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆ. 20ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಶಂಕರ್ ಆರ್. ಹೆಗ್ಡೆ ಡೊಂಬಿವಿಲಿ ಇವರು ಅವಿರೋಧವಾಗಿ ಚುನಾಯಿತರಾದರೆ, ರಮೇಶ್ ಎಂ. ಹೆಗ್ಡೆ ಕೋಶಾಧಿಕಾರಿಯಾಗಿ, ಸಂಜೀವ ಪಿ. ಹೆಗ್ಡೆ ಮುಲುಂಡ್ ಇವರನ್ನು ಗೌರವ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಉಳಿದ 19 ಮಂದಿ ಸದಸ್ಯರಿಗಾಗಿ ಚುನಾವಣೆ ನಡೆದಿದ್ದು ಚುನಾಯಿತರನ್ನು ಸೆ. 10ರಂದು ನಡೆದ ಜಂಟಿ ಸಭೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಆರಿಸಲಾಯಿತು. ಸುರೇಶ್ ಎಸ್. ಹೆಗ್ಡೆ ನೆರೂಲ್ ಇವರನ್ನು ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು. ಜೊತೆ ಕಾರ್ಯ
ದರ್ಶಿಯಾಗಿ ರವಿ ಎಸ್. ಹೆಗ್ಡೆ ಹೆರ್ಮುಂಡೆ ಮತ್ತುಜತೆ ಕೋಶಾಧಿಕಾರಿಯಾಗಿ ಚಂದ್ರಶೇಖರ್ ಬಿ. ಹೆಗ್ಡೆ ಐರೋಲಿ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಬಿ. ಗೋಪಾಲ್ ಹೆಗ್ಡೆ ಇವರನ್ನು ಕ್ಯಾಟರಿಂಗ್ ಹಾಗೂ ಡೆಕೊರೇಷನ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ, ಜಯರಾಮ ಹೆಗ್ಡೆ ಕಲ್ಯಾಣ್ ಇವರನ್ನು ಸದಸ್ಯತನದ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ, ಲೀಲಾವತಿ ರವೀಂದ್ರ ಹೆಗ್ಡೆ ಮುಲುಂಡ್ ಇವರನ್ನು ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ, ರವಿ ಎಸ್. ಹೆಗ್ಡೆ ಹೆರ್ಮುಂಡೆ ಇವರನ್ನು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ, ಶಶಿಧರ್ ಹೆಗ್ಡೆ ಇವರನ್ನು ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ, ಕೆ. ಪ್ರಸನ್ನ ಹೆಗ್ಡೆ ಇವರನ್ನು ಹೆಗ್ಗಡೆ ಭವನ ಕಟ್ಟಡ ನಿರ್ವಹಣೆ ಸಮಿತಿ ಇದರ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಅಭಿಷೇಕ್ ಸುಧಾಕರ್ ಹೆಗ್ಡೆ ವಿಕ್ರೋಲಿ ಇವರನ್ನು ಯುವ ವಿಭಾಗ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಆರಿಸಲಾಯಿತು.
ಸದಸ್ಯರಾಗಿ ಪ್ರಭಾಕರ್ ಹೆಗ್ಡೆ, ಅನಿಲ್ ಕುಮಾರ್ ಹೆಗ್ಡೆ, ಮಂಜುನಾಥ್ ಹೆಗ್ಡೆ, ರಾಜೇಶ್ ಹೆಗ್ಡೆ, ನವೀನ ಹೆಗ್ಡೆ, ಸಂತೋಷ್ ಹೆಗ್ಡೆ, ವಿಶ್ವನಾಥ್ ಹೆಗ್ಡೆ, ಸಂದೇಶ್ ಜೆ. ಹೆಗ್ಡೆ, ಸುಜಾತಾ ಸದಾಶಿವ್ ಹೆಗ್ಡೆ, ಭಾರತಿ ಮೋಹನದಾಸ್ ಹೆಗ್ಡೆ, ಸೇವಂತಿ ಎಲ್ ಹೆಗ್ಡೆ ಅವರು ಆಯ್ಕೆಗೊಂಡರು. ಯುವ ವಿಭಾಗದ ಸದಸ್ಯರಾಗಿ ನವೀನ ಬಿ. ಹೆಗ್ಡೆ, ಜ್ಞಾನಕುಮಾರ್ ಎಲ್. ಹೆಗ್ಡೆ, ನಿಕಿತಾ ವಿ. ಹೆಗ್ಡೆ, ರೇಶ್ಮಾ ಎಸ್. ಹೆಗ್ಡೆ, ವಿಷ್ಮಾ ವಿ. ಹೆಗ್ಡೆ, ನಿಶಾ ಎಸ್. ಹೆಗ್ಡೆ, ನೇಹಾ ಎಸ್. ಹೆಗ್ಡೆ, ಶ್ರೀನಿಧಿ ಎಂ. ಹೆಗ್ಡೆ, ಚಂದ್ರಹಾಸ್ ಹೆಗ್ಡೆ, ನಿತಿನ್ ಹೆಗ್ಡೆ ಮತ್ತು ಸಂತೋಷ್ ಹೆಗ್ಡೆ ಇವರು ಆಯ್ಕೆಗೊಂಡರು.