Advertisement
ಸಭೆಯು ಕಾರ್ಕಳ ತಹಸೀಲ್ದಾರ್ ಮಹಮದ್ ಇಸಾಕ್ ಅವರ ನೇತೃತ್ವದಲ್ಲಿ ನಡೆಯಿತು.ಮಳೆಗಾಲ ಆರಂಭಗೊಂಡು ಒಂದು ತಿಂಗಳು ಕಳೆದರೂ ಚರಂಡಿ ವ್ಯವಸ್ಥೆ ಇಲ್ಲ,ಅಪಾಯಕಾರಿಮರಗಳಳನ್ನು ತೆರವು ಮಾಡಿಲ್ಲ. ವಿದ್ಯುತ್ ಸಮಸ್ಯೆಯ ಬಗ್ಗೆ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ದೂರಿದರು.
ಮನೆಗೆ ಮರ ಬೀಳುವ ಸಂಭವವಿದೆ. ವಿದ್ಯುತ್ ತಂತಿ ಪಕ್ಕದಲ್ಲೆ ಹೋಗಿರುವುದರಿಂದ ಅನಾಹುತ ಸಂಭವಿಸುತ್ತದೆ ಎಂದು ಇಲಾಖೆಯ ಅಧಿಕಾರಿಗಳಲ್ಲಿ ಹೇಳಿದಾಗ ನಿಮಗೆ ಮರದ ಬುಡದಲ್ಲಿ ಮನೆಕಟ್ಟಲು ಯಾರು ಹೇಳಿದರು ಎಂದು ನಮ್ಮನ್ನೇ ಗದರಿಸುವುದಾಗಿ ಹೆಬ್ರಿ ಪಂಚಾಯತ್ ಸದಸ್ಯ ಪುತ್ರನ್ ಆರೋಪಿಸಿದರು. ಸ್ಪಂದನೆ ಇಲ್ಲ
ಪ್ರಕೃತಿ ವಿಕೋಪದಿಂದ ಹಾನಿಗೀಡಾದವರಿಗೆ ಪರಿಹಾರ ನೀಡುವ ಮೊದಲು ಪ್ರಕೃತಿ ವಿಕೋಪವಾಗದಂತೆ ಮೊದಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ .ಈಗಾಗಲೇ ಸೋಮೇಶ್ವರ ಪ್ರದೇಶದಲ್ಲಿ ವಿದ್ಯುತ್ ತಂತಿ ತಗಲಿ ಮೃತಪಟ್ಟವರ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಇಲಾಖೆ ಯಾಕೆ ಕೊಟ್ಟಿಲ್ಲ ಎಂದು ಗುಲ್ಕಾಡು ಭಾಸ್ಕರ್ ಶೆಟ್ಟಿ ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದರು.
Related Articles
ವಿದ್ಯುತ್ ಕಂಬ ಎರಲು ಏಣಿಯನ್ನು ಸ್ಥಳೀಯರೇ ವ್ಯವಸ್ಥೆ ಮಾಡಬೇಕು ಎಂಬ ಅಧಿಕಾರಿಗಳು ಮಾತು ಅವರ ಅಸಮರ್ಪಕ ಸೇವೆ ಸಾಭೀತುಮಾಡುತ್ತದೆ. ಮಳೆಗಾಳಿಯಿಂದ ವಿದ್ಯುತ್ ಕೈಕೊಟ್ಟು ಒಂದು ವಾರವಾದರೂ ಮೆಸ್ಕಾಂನವರು ಶೀಘ್ರವಾಗಿ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಬೇಳಂಜೆ ಹರೀಶ್ ಪೂಜಾರಿ ಅಧಿಕಾರಿಗಳ ಗಮನ ಸೆಳೆದರು.
Advertisement
ತಾಲೂಕು ಪಂಚಾಯತ್ ಇಒ ಡಾ| ಹರ್ಷ, ನೊಡೆಲ್ ಅಧಿಕಾರಿ ಭುವನೇಶ್ವರಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ಮಾಲಿನಿ ಜೆ.ಶೆಟ್ಟಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಸ್ಯೆಗೆ ಸ್ಪಂದಿಸಿಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿದಾಗ ಕೂಡಲೇ ಇಲಾಖೆ ಅಧಿಕಾರಿಗಳಿಗೆ ಆ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶೀಘ್ರ ಸಮಸ್ಯೆಬಗೆಹರಿಸುವಲ್ಲಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಒಂದು ವೇಳೆ ಅವರು ಸ್ಪಂದಿಸದಿದ್ದಲ್ಲಿ ಸಾರ್ವಜನಕರು ನೇರವಾಗಿ ತಾಲೂಕು ಹೆಲ್ಪಲೈನ್‌ಗೆ ಕರೆಮಾಡಿ.
– ಮಹಮ್ಮದ್ ಇಸಾಕ್, ಕಾರ್ಕಳ ತಹಸೀಲ್ದಾರ್