Advertisement
ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ರೋಹಿಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಆಕ್ರೋಷ ವ್ಯಕ್ತಪಡಿಸಿ ಇದೇ ರೀತಿ ಸಮಸ್ಯೆ ಮುಂದುವರಿದರೆ ಉಗ್ರಪ್ರತಿಭಟನೆ ನಡೆಸಾಗುವುದು ಎಂದರು.ಚಾರ ರತ್ನಾಕರ ಶೆಟ್ಟಿ, ಅಣ್ಣಪ್ಪ ಕುಲಾಲ್, ಪಾಂಡುರಂಗಪೂಜಾರಿ, ರಾಜೀವ ಶೆಟ್ಟಿ, ಡಿ.ಜಿ. ರಾಘವೇಂದ್ರ, ಪ್ರವೀಣ್ ಸೂಡ, ಇಂದಿರಾ ನಾಯ್ಕ ಮೊದಲಾದವರು ಸಮಸ್ಯೆಗಳ ಬಗ್ಗೆ ಆರೋಗ್ಯ ಅಧಿಕಾರಿಯ ಗಮನಕ್ಕೆ ತಂದರು. ಹೆಬ್ರಿ ಠಾಣಾಧಿಕಾರಿ ಜಗನ್ನಾಥ ಟಿ ಮೊದಲಾದವರಿದ್ದರು.
ಸಂಜೀವ ಶೆಟ್ಟಿ ಅವರು ನೀಡಿದ ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸುವಂತೆ ತಾಲೂಕು ಅಧಿಕಾರಿಗಳಿಗೆ ತಿಳಿಸಿದ್ದು ಅಧಿಕಾರಿಗಳು ಬೇಟಿ ನೀಡಿ ಸಮಸ್ಯೆಯನ್ನು ಸರಿಪಡಿಸುವಂತೆ ವರದಿ ನೀಡಿದ್ದು ಆ ಪ್ರಕಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ತಾಲೂಕುಗಳಿಂದ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು ಪ್ರತೀ ತಿಂಗಳು 4,000ದಿಂದ 4,500 ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹೆದ್ದಾರಿಯ ಪಕ್ಕದಲ್ಲಿದ್ದು ಸಾಕಷ್ಟು ಎಂಎಲ್‌ಸಿ ಪ್ರಕರಣಗಳು ಕೂಡ ದಾಖಲಾಗುತ್ತವೆ. ಭೌಗೋಳಿಕವಾಗಿಯೂ ಕೂಡ ಕೇಂದ್ರಸ್ಥಾನ ದಲ್ಲಿರುತ್ತದೆ. ಒಟ್ಟು 1 ಹಿರಿಯ ವೈದ್ಯಾಧಿಕಾರಿ ಹಾಗೂ 3 ತಜ್ಞವೈದ್ಯರ ಹುದ್ದೆ ಮಂಜೂರಾಗಿದ್ದು ಪ್ರಸ್ತುತ ಓರ್ವ ಹಿರಿಯ ವೈದ್ಯಾಧಿಕಾರಿ ಮತ್ತು ಓರ್ವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಆಯುಷ್ ವೈದ್ಯಾಧಿಕಾರಿ, ಓರ್ವ ದಂತ ವೈದ್ಯಾಧಿಕಾರಿ ಕರ್ತವ್ಯದಲ್ಲಿರುತ್ತಾರೆ. ಆದ್ಯತೆಯ ಮೇರೆಗೆ ಎಲ್ಲಾ ತಜ್ಞ ವೈದ್ಯರ ಹುದ್ದೆಯನ್ನು ಭರ್ತಿ ಮಾಡುವಂತೆ ವರದಿ ಮಾಡಿದ್ದಾರೆ. ಹಾಗೂ ಅಲ್ಲಿಯವರೆಗೆ 2 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಯವರನ್ನು ನೇಮಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.
Related Articles
Advertisement
ಈ ಎಲ್ಲಾ ಹೆಚ್ಚುವರಿ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸಲ್ಲಿಸಿರುವುದಾಗಿ ಪರಿಶೀಲನಾ ವರದಿಯಲ್ಲಿ ತಿಳಿಸಲಾಗಿದೆ.
ಸಮಸ್ಯೆ ಏನು: ಸಮುದಾಯ ಆರೋಗ್ಯ ಕೇಂದ್ರದಲ್ಲಿ 3 ತಜ್ಞ ವೈದ್ಯರ ಹುದ್ದೆ ಖಾಲಿ ಇದ್ದು, ಓರ್ವ ಆಡಳಿತ ವೈದ್ಯಾಧಿಕಾರಿ ಮತ್ತು ಒಬ್ಬ ಎಂಬಿಬಿಎಸ್ ವೈದ್ಯಾಧಿಕಾರಿ ಹಾಗೂ ಒರ್ವ ಆಯುರ್ವೇದ ವೈದ್ಯಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ. ಆ.ಕೇಂದ್ರ ವ್ಯಾಪ್ತಿಯಲ್ಲಿ 3 ಕಂದಾಯ ಗ್ರಾಮಗಳು, 12 ಉಪಕೇಂದ್ರ, 6 ಗ್ರಾ.ಪಂ.ಗಳಿರುತ್ತದೆ. ಗ್ರಾಮ ಸಭೆ, ಅಂಗನವಾಡಿ ಕಾರ್ಯಕರ್ತೆಯರ ಸಭೆ, ಕ್ಷೇತ್ರ ಸಿಬಂದಿಯವರ ಕಾರ್ಯಕ್ರಮ, ಪ್ರಗತಿ ಪರಿಶೀಲನ ಸಭೆ, 37 ಅಂಗನವಾಡಿ ಭೇಟಿ, ಕ್ಷೇತ್ರ ಭೇಟಿ, ಸಾಂಕ್ರಾಮಿಕ ಖಾಯಿಲೆ ಕಂಡುಬಂದಲ್ಲಿ ನಿಯಂತ್ರಣದ ಬಗ್ಗೆ ಕ್ಷೇತ್ರ ಸಿಬಂದಿಗೆ ಸೂಕ್ತ ಮಾರ್ಗದರ್ಶನ ನೀಡುವುದು, ವೈದ್ಯಾಧಿಕಾರಿಗಳ ತಾಲೂಕು/ ಜಿಲ್ಲಾ ಮಟ್ಟದ ಸಭೆಗೆ ಹಾಜಾರಾಗುವುದು, ತರಬೇತಿ ನಿಯೋಜಿಸಿದಲ್ಲಿ ಹಾಜಾರಾಗುವುದು, ಹಾಗೂ ಸಂಸ್ಥೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಆಕಸ್ಮಿಕ / ಅಸಹಜ ಸಾವಿನ ಪ್ರಕರಣಗಳ ಮರಣೋತ್ತರ ಪರೀಕ್ಷೆ, ಹಲ್ಲೆ, ಅಪಘಾತ ಪ್ರಕರಣಗಳಿಗೆ ದೃಢಪತ್ರ ನೀಡುವುದು, ವಯಸ್ಸಿನ ದೃಢಪತ್ರ ನೀಡುವುದು ಜೊತೆಗೆ ಇಲಾಖೆ ಸೂಚಿಸಿದ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಜವಾಬ್ದಾರಿ ಹಾಗೂ ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಕ್ಷೇತ್ರ ಸಿಬಂದಿಗೆ ಮಾರ್ಗದರ್ಶನ ನೀಡುವುದು ಜೊತೆಗೆ ಕಛೇರಿಯ ಆಡಳಿತ ನಿರ್ವಹಣೆ ಮತ್ತು ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವುದು, ವಾರದ ಮಾಸಿಕ ವರದಿ ತಯಾರಿಸುವಲ್ಲಿ ಅಧೀನ ಸಿಬಂದಿಗೆ ಸಲಹೆ ನೀಡುವುದು. ಈ ಎಲ್ಲ ಜವಾಬ್ದಾರಿಗಳನ್ನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಡಳಿತ ವೈದ್ಯಾಧಿಕಾರಿ ಆಯುಷ್ ವೈದ್ಯಾಧಿಕಾರಿ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.