Advertisement

ಹೆಬ್ಬಾಳಕರ ಬಿಜೆಪಿ ಸೇರುವ ಸಾಧ್ಯತೆ: ಸವದಿ

11:15 PM Nov 24, 2019 | Team Udayavani |

ಅಥಣಿ: ಬೆಳಗಾವಿ ರಾಜಕಾರಣ ಬದಲಾಗಬೇಕು. ಇದು ರಾಜಕೀಯ ಧೃವೀಕರಣ ಎಂದಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಬಹುಶಃ ಅವರು ಬಿಜೆಪಿಗೆ ಬಂದರೂ ಬರಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Advertisement

ಪಟ್ಟಣದ ಸ್ವಗೃಹದಲ್ಲಿ ಮಾತನಾಡಿ, ಎಲ್ಲಾದರೂ ಅವಕಾಶ ಸಿಕ್ಕರೆ ಅವರೊಂದಿಗೆ ಮಾತನಾಡುತ್ತೇನೆ. ಅವರಿಗೂ ಬಿಜೆಪಿ ಬರುವ ಇಚ್ಛೆ ಇದ್ದರೆ ನಾವು ಸ್ವಾಗತಿಸುತ್ತೇವೆ. ಇನ್ನು ಕಾಂಗ್ರೆಸ್‌ನಲ್ಲಿ ಅನುದಾನಕ್ಕಾಗಿ ಕೈ-ಕಾಲು ಹಿಡಿಯುವ ಸಂಸ್ಕೃತಿ ಇದೆ. ಇದರಿಂದಾಗಿಯೇ 17 ಜನ ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಿದ್ದಾರೆ ಎಂದರು.

ಇನ್ನೂ 35 ಜನ ನನ್ನ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಖಾಲಿ ಮಾಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದು ಸರಿಯಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಉಸಿರುಗಟ್ಟುವ ವಾತಾವರಣ ಇದ್ದಿದ್ದರಿಂದ ಸಾಕಷ್ಟು ಶಾಸಕರು ಕಾಂಗ್ರೆಸ್‌ ಬಿಟ್ಟು ಬಂದಿದ್ದಾರೆ.

ಇನ್ನೂ ಕೆಲ ಶಾಸಕರು ಹೊರಗೆ ಬಂದರೂ ಬರಬಹುದು. ಅದರಲ್ಲಿ ಆಶ್ಚರ್ಯವೆನಿಲ್ಲ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದೆ. ಖರ್ಗೆ ಅವರದ್ದು ಒಂದು ಗುಂಪು, ಸಿದ್ದರಾಮಯ್ಯ ಅವರದ್ದು ಮತ್ತೂಂದು, ಪರಮೇಶ್ವರ ಅವರದ್ದು ಇನ್ನೊಂದು. ಹೀಗೆ ಒಬ್ಬೊಬ್ಬರದ್ದು ಒಂದು ಗುಂಪಿನಿಂದಾಗಿ ಕಾಂಗ್ರೆಸ್‌ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next