ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ, ಹೊನ್ನಾಳಿ ರಸ್ತೆಯಲ್ಲಿರುವ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಹೊನ್ನಾಳಿ ಕಡೆಯಿಂದ ಬರುವ ಬಸ್ಸು, ಲಾರಿ, ಕಾರು ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ಸೇತುವೆ ಮೇಲೆ ಬಿಡಲಾಗುತ್ತಿದೆ. ಆದರೆ ಶಿವಮೊಗ್ಗದ ಕಡೆಯಿಂದ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.ಸೇತುವೆ ಮುಂಭಾಗ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದು, ಪರ್ಯಾಯ ಮಾರ್ಗದಲ್ಲಿಸಂಚರಿಸುವಂತೆ ಸೂಚಿಸುತ್ತಿದ್ದಾರೆ.
ಸೇತುವೆ ಮೇಲೆ ಸಮಸ್ಯೆ ಏನು?: ಸೇತುವೆ ಮೇಲೆ ಜಾಯಿಂಟ್‌ಗಳಿರುವ ಕಡೆಯಲ್ಲಿ ಕಬ್ಬಿಣದ ರಾಡ್ ಗಳು ಮೇಲೆದ್ದಿವೆ. ಇದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜಾಯಿಂಟ್‌ಗಳಿರುವ ಕಡೆಯಲ್ಲಿ ಕಾಂಕ್ರಿಟ್ ಹಾಕಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನೂ 25 ದಿನ ಕೆಲಸ: ಸೇತುವೆ ಮೇಲೆ ಸೋಮವಾರದಿಂದ ಕಾಮಗಾರಿ ಆರಂಭವಾಗಿದೆ. ಸುಮಾರು 25 ದಿನ ಕಾಮಗಾರಿ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ಸಂಪತ್ ಕುಮಾರ್ ತಿಳಿಸಿದ್ದಾರೆ.
ಕಾಂಕ್ರೀಟ್ ಹಾಕಿ ಜಾಯಿಂಟ್‌ಗಳನ್ನು ಬಂದ್ ಮಾಡಲಾಗುತ್ತದೆ. ಹಾಗಾಗಿ ಇಷ್ಟು ಸಮಯ ಹಿಡಿಯುವಸಾಧ್ಯತೆ ಇದೆ. ಹೊನ್ನಾಳಿ, ರಾಗಿಗುಡ್ಡ ಕಡೆಯಿಂದ ಬರುವವಾಹನಗಳು ಸೇತುವೆ ಮೇಲಿಂದ ಶಿವಮೊಗ್ಗ ನಗರದ ಕಡೆಗೆಬರಬಹುದು. ಆದರೆ ಶಿವಮೊಗ್ಗ ಸಿಟಿಯ ಕಡೆಯಿಂದ ರಾಗಿಗುಡ್ಡ, ಹೊನ್ನಾಳಿ ಕಡೆಗೆ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ದ್ವಿಚಕ್ರ ವಾಹನಗಳನ್ನು ಮಾತ್ರ ಸೇತುವೆ ಮೇಲೆ ಬಿಡಲಾಗುತ್ತಿದೆ. ಇನ್ನು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸವಳಂಗ ರಸ್ತೆಯಲ್ಲಿ ಜೆಎನ್ ಎನ್‌ಸಿ ಕಾಲೇಜು ಬಳಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.