Advertisement

ಕರಾವಳಿಯಲ್ಲಿ ಭಾರಿ ಮಳೆ ಸಂಭವ

03:45 AM Jul 04, 2017 | |

ಬೆಂಗಳೂರು: ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕರಾವಳಿಯ ಎಲ್ಲೆಡೆ ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿತ್ತು. ಕೊಲ್ಲೂರಿನಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 16 ಸೆಂ. ಮೀ. ಮಳೆ ಸುರಿದಿದೆ.

Advertisement

ಇದೇ ಅವಧಿಯಲ್ಲಿ ರಾಜ್ಯದ ಉಳಿದೆಡೆ ಬಿದ್ದ ಮಳೆಯ ಪ್ರಮಾಣ ಇಂತಿದೆ (ಸೆಂ.ಮೀ.ಗಳಲ್ಲಿ): ಗೇರುಸೊಪ್ಪಾ 12, ಹೊನ್ನಾವರ 8, ಮಂಗಳೂರು, ಕದ್ರಾ ತಲಾ 6, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಶಿರಾಲಿ, ಸಿದ್ದಾಪುರ, ಶೃಂಗೇರಿ ತಲಾ 5, ಧರ್ಮಸ್ಥಳ, ಮಂಕಿ, ಭಾಗಮಂಡಲ, ಜಯಪುರ ತಲಾ 4, ಮೂಡಬಿದ್ರೆ, ಬೆಳ್ತಂಗಡಿ, ಅಂಕೋಲಾ, ಆಗುಂಬೆ ತಲಾ 3, ಪುತ್ತೂರು, ಕೋಟಾ, ಕಾರ್ಕಳ, ಕುಂದಾಪುರ, ಕಾರವಾರ, ಕುಮಟಾ, ಮಂಚಿಕೇರಿ, ಜಗಳ್‌ಪೇಟೆ, ಖಾನಾಪುರ, ಮಡಿಕೇರಿ, ನಾಪೊಕ್ಲು, ತಾಳಗುಪ್ಪ, ಹುಂಚದಕಟ್ಟೆ, ಕೊಟ್ಟಿಗೆಹಾರ, ಕಮ್ಮರಡಿ ತಲಾ 2, ಪೊನ್ನಂಪೇಟೆ, ವಿರಾಜಪೇಟೆ, ಬಾಳೆಹೊನ್ನೂರು ತಲಾ 1 ಸೆಂ.ಮೀ.ಮಳೆಯಾಗಿದೆ. ಮುಂದಿನ 24 ತಾಸುಗಳ ಅವಧಿಯಲ್ಲಿ ಕರಾವಳಿಯಲ್ಲಿ ಭಾರಿ ಹಾಗೂ ಒಳನಾಡುಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next