Advertisement
ದ.ಕ., ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಮತ್ತು ಶನಿವಾರ ಬಿರುಸಿನಿಂದ ಕೂಡಿದ ಮಳೆಯಾಗಿದೆ. ಸುಳ್ಯ ತಾಲೂಕಿನ ಹಲವೆಡೆ ಶುಕ್ರವಾರದಿಂದ ಭಾರೀ ಮಳೆಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ನೀರಿಗೆ ಕೊಚ್ಚಿ ಹೋಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರ ಸುರಿದ ಮಳೆಗೆ ಸೋಮಾವತಿ ನದಿಯಲ್ಲಿ ಕೊಚ್ಚಿ ಹೋದ ದನವನ್ನು ರಕ್ಷಣೆ ಮಾಡಲಾಗಿದೆ. ಉಳಿದಂತೆ ಪುತ್ತೂರು, ಉಪ್ಪಿನಂಗಡಿ, ಕಡಬ, ಕುಂಬ್ರ, ಪಾಣಾಜೆ, ಸುಳ್ಯ, ಚೊಕ್ಕಾಡಿ, ಪಂಜ, ಬೆಳ್ತಂಗಡಿ, ಮಡಂತ್ಯಾರು ಧರ್ಮಸ್ಥಳ, ಉಜಿರೆ, ಚಾರ್ಮಾಡಿ, ಬಂಟ್ವಾಳ, ಬಿ.ಸಿ. ರೋಡು, ಮಾಣಿ, ಕಲ್ಲಡ್ಕ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದೆ. ಕೆಲವು ಕಡೆ ಗಾಳಿ-ಮಳೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಗಳೂರಿನಲ್ಲಿ ಶನಿವಾರ ದಿನವಿಡೀ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ಮಳೆ ಮಳೆಯಾಗಿದೆ.
ಕಿನ್ನಿಗೋಳಿ: ಭಾರೀ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಕಿನ್ನಿಗೋಳಿ ಪ್ರದೇಶದ ಭತ್ತದ ಗದ್ದೆಗಳು ಹಾನಿಗೀಡಾದ ಕಾರಣ ಭಾರೀ ನಷ್ಟ ಉಂಟಾಗಿದೆ. ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ
Related Articles
ಉಡುಪಿ ಜಿಲ್ಲೆಯಲ್ಲಿ ಗುರುವಾರ, ಶುಕ್ರವಾರ ಬಂದ ಸಿಡಿಲು, ಗುಡುಗು ಸಹಿತ ಭಾರೀ ಮಳೆಗೆ ಜಿಲ್ಲೆಯಲ್ಲಿ ವಿವಿಧ ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲೂಕಿನಲ್ಲಿ ಮೂರು ಮನೆಗಳು, ಉಡುಪಿ ತಾಲೂಕಿನ ಎರಡು ಮನೆಗಳಿಗೆ ಸಿಡಿಲಿನಿಂದ ಮನೆಗೆ ಭಾಗಶಃ ಹಾನಿಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಜಾನುವಾರಿಗೆ ಸಿಡಿಲು ಬಡಿದು ಮೃತಪಟ್ಟಿದೆ. ಕುಂದಾಪುರ ತಾಲೂಕಿನ 12 ಮನೆಗಳಿಗೆ ಹಾನಿ ಉಂಟಾಗಿದೆ. ವಿವಿಧ ತಾಲೂಕುಗಳಲ್ಲಿ ಶನಿವಾರವೂ ಮಳೆಯಾಗಿದೆ.
Advertisement
ನಾಲ್ಕು ದಿನ ಮಳೆ ಸಾಧ್ಯತೆರಾಜ್ಯ ಕರಾವಳಿ ಭಾಗದಲ್ಲಿ ನ.7ರಿಂದ 10ರವರೆಗೆ “ಎಲ್ಲೋ ಅಲರ್ಟ್’ ಘೊಷಿಸಲಾಗಿದ್ದು ಕೆಲವು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ.