Advertisement
ವಿ.ಬಾಡಗ ಗ್ರಾಮದ ತೀತಿಮಾಡ ಕುಟುಂಬಸ್ಥರ ಗದ್ದೆ ಏರಿಗಳು ಹೊಡೆದುಹೋಗಿ ಸಂಪೂರ್ಣ ಜಲಾವೃತಗೊಂಡಿದೆ. ಕುಟ್ಟಂದಿ, ಕಂಡಗಾಲ, ರುದ್ರುಗುಪ್ಪೆ, ಬಿ.ಶೆಟ್ಟಿಗೇರಿ ಭಾಗಗಳಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಬೇಗೂರು ಕೊಲ್ಲಿ ಗದ್ದೆಗಳು ಭಾಗಾಂಶ ನೀರು ತುಂಬಿಕೊಂಡಿದೆ. ರಸ್ತೆಯ ಮೇಲಾºಗದಲ್ಲೂ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ರಜೆಯನ್ನು ಮಕ್ಕಳು ಶಾಲೆಗೆ ತೆರಳಿದ ಅನಂತರವೇ ರಜೆ ನೀಡಿರು ವುದರ ಪರಿಣಾಮ ಮಕ್ಕಳಿಗೆ ಸಮಸ್ಯೆಯಾಗಿದೆ. ಎಂದು ಪೋಷಕರು ಆರೋಪಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ನೀಡಿದರೂ ಕಾಲೇಜು ವಿಭಾಗದ ಮಕ್ಕಳಿಗೆ ರಜೆ ನೀಡಿರಲಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಅಧಿಕಾರಿಗಳು ಮಳೆಯ ವಿವರಗಳನ್ನು ಮೇಲಾಧಿಕಾರಿಗಳಿಗೆ ಮಾಹಿತಿ ನೀಡದ ಪರಿಣಾಮ ಶಾಲಾ ಕಾಲೇಜು ಮಕ್ಕಳಿಗೆ ರಜೆ ನೀಡುವುದರ ಬಗ್ಗೆ ಯಾವುದೇ ಮಾಹಿತಿಯಿರದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಪೋಷಕರ ಅಳಲು.
Related Articles
ಸೋಮವಾರಪೇಟೆ: ವರುಣನ ಅರ್ಭಟ ಮುಂದುವರಿ ದಿದ್ದು, ಮರಗಳು ಧರೆಗುರುಳುತ್ತಿರುವ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
Advertisement
ಮರಗಳು ವಿದ್ಯುತ್ ಕಂಬ ತಂತಿಗಳ ಮೇಲೆ ಬೀಳುತ್ತಿರುವುದರಿಂದ ಸೆಸ್ಕ್ ಶಾಂತಳ್ಳಿ ವಲಯದಲ್ಲಿ 40 ಕಂಬಗಳು ಮುರಿದುಬಿದ್ದಿವೆ. ತಾಕೇರಿ, ಕಿರಗಂದೂರು, ಕೊತ್ನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಬಾಚಳ್ಳಿ, ಕುಮಾರಳ್ಳಿ, ಹಂಚಿನಳ್ಳಿ, ಹರಗ, ಬೆಟ್ಟದಳ್ಳಿ, ದೊಡ್ಡಮಳೆ, ಸುಳಿಮಳೆ, ಕೂಗೂರು ಗ್ರಾಮಗಳು ಕರೆಂಟ್ ಇಲ್ಲದೆ ಕತ್ತಲೆಯಲ್ಲೇ ದಿನದೂಡಬೇಕಾಗಿದೆ.ಸೆಸ್ಕ್ ಸಿಬಂದಿ ವಿದ್ಯುತ್ ಕಂಬ, ತಂತಿ ಸರಿಪಡಿಸುವ ಕರ್ತವ್ಯದಲ್ಲಿ ತೊಡಗಿದ್ದಾರೆ. ಕಾಫಿ ತೋಟಗಳಲ್ಲೂ ಮರಗಳು ಹಾಗು ರೆಂಬೆಗಳು ಮುರಿದು ಬೀಳುತ್ತಿವೆ.
ಸಂಚಾರ ಸ್ಥಗಿತಮಡಿಕೇರಿ: ಭಾರೀ ಮಳೆಯಿಂದಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ ಕಣ್ಣನೂರು-ತಲಚೇರಿಗಳಿಂದ ವಿರಾಜಪೇಟೆ ಮಾರ್ಗವಾಗಿ ಮೈಸೂರು-ಬೆಂಗಳೂರಿಗೆ ಸಾಗುವ ವಾಹನಗಳಿಗೆ ಇರಿಟ್ಟಿ-ಮಾನಂದವಾಡಿ-ಕುಟ್ಟ-ಗೋಣಿಕೊಪ್ಪಕ್ಕಾಗಿ ಸಾಗಲು ಅನುಕೂಲ ಮಾಡಿಕೊಡಲಾಗಿದೆ.