Advertisement

Heavy rain; ರಾಹುಲ್ ಗಾಂಧಿ ಸಮಾವೇಶ ವ್ಯತ್ಯಯ

01:56 PM Apr 28, 2023 | Team Udayavani |

ಕಲಬುರಗಿ: ಜಿಲ್ಲೆಯ ಜೇರ್ವಗಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದ ಆರಂಭದಲ್ಲೆ ಭಾರಿ ಮಳೆ ಅಡ್ಡಿಯಾಗಿದೆ.

Advertisement

ಆದರೆ, ಗುಡುಗು ಸಿಡಿಲಿನ ಆರ್ಭಟದ ಮಧ್ಯೆಯೂ ಜನ ರಾಹುಲ್ ಗಾಗಿ ಕಾದು ನಿಂತಿದ್ದಾರೆ. ಹವಾಮಾನ ವೈಪರೀತ್ಯ ದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಳಗ್ಗೆ ನಿಗಧಿತ ಸಮಯದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಬರಲಾಗಲಿಲ್ಲ. ಮಂಗಳೂರಿನಿಂದ ಬೆಳಗ್ಗೆ 12 ಗಂಟೆಗೆ ವಿಮಾನದ ಮುಖೇನ ಕಲಬುರಗಿ ವೇಳೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಆದರೆ ಅಲ್ಲಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಜೇವರ್ಗಿ ಬರಬೇಕೆಂದರೆ ಮೋಡ ಕವಿದ ವಾತಾವರಣ ಇರುವುದರಿಂದ ಸಾಧ್ಯವಾಗಲಿಲ್ಲ. ಇದೇ ವೇಳೆ ಜೇವರ್ಗಿ ಯಲ್ಲಿ ಭಾರಿ ಮಳೆ ಬೀಳಲಾರಂಭಿಸಿದೆ. ಪ್ರಯುಕ್ತ ಅವರನ್ನು ರಸ್ತೆ ಮೂಲಕ ಕರೆ ತರಯವ ಯತ್ನ ನಡೆದಿದೆ.

ಕಾಂಗ್ರೆಸ್ ಯುವರಾಜನ ನೋಡಲು ಜನರು ಜಡಿವ ಮಳೆ ಮಧ್ಯೆ ಕಾತುರದಿಂದ ಕಾಯುತ್ತಿದ್ದರೆ. ಈ ಸುರಿವ ಮಳೆಯಲ್ಲಿ ಕಾಯುತ್ತಿರುವ ಜನರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಡಾ.ಅಜಯಸಿಂಗ್ ಮಳೆ ಒಳ್ಳೆಯ ಸಂಕೇತ. ರೈತರಿಗೆ ಸುಭ ಸೂಚನೆ. ಇದರೊಂದಿಗೆ ರಾಜ್ಯವನ್ನಾಳಿದ ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ವೇದಿಕೆಯೂ ಆಗಲಿದೆ. ಇದೇ ವೇಳೆ ಬಿ.ಆರ್.ಪಾಟೀಲ, ಡಾ.ಶರಣಪ್ರಕಾಶ ಪಾಟೀಳ, ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ಸುಭಾಷ್ ರಾಠೋಡ್, ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು. ಜೇವರ್ಗಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಬೀಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next