Advertisement
ಗದಗದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದಿತ್ತು. ಇದರಿಂದಾಗಿ ದೊಡ್ಡೂರು ಹಳ್ಳದ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿತ್ತು. ಈ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಚಾಲಕ ಬಸ್ ಅನ್ನು ಸೇತುವೆ ಮೇಲೆ ಚಲಾಯಿಸಿದಾಗ ನೀರಿನ ರಭಸಕ್ಕೆ ಬಸ್ ಹಳ್ಳಕ್ಕೆ ಬಿದ್ದಿತ್ತು.
ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದರು. ಏತನ್ಮಧ್ಯೆ ಬಸ್ ನೊಳಗಿದ್ದ ಅಜ್ಜ ಹೆದರಿಕೆಯಿಂದ ಬಸ್ ಕಿಟಕಿ ಬಳಿಯೇ ನಿಂತಿದ್ದನ್ನು ಕಂಡು ಗ್ರಾಮಸ್ಥರು, ಗ್ಲಾಸ್ ಒಡೆದು ಆ ಕಡೆ ಹೋಗೋ ಎಂದು ಹೇಳುತ್ತಿದ್ದರೆ, ಮತ್ತೊಂದು ಗುಂಪು ಏಯ್ ಅಜ್ಜ ಏನೂ ಆಗಲ್ಲ ಹಗ್ಗ ಹಿಡಿದು ಬಾರೋ ಎಂದು ಹೇಳುತ್ತಿದ್ದರು.ಆದಕ್ಕೆ ಅಜ್ಜ ನಾ ಹೆಂಗ್ ಬರಲಪ್ಪ ಎಂದು ಹೇಳುತ್ತಿದ್ದ. ಅಂತೂ ಕೊನೆಗೆ ಅಜ್ಜ ಧೈರ್ಯ ಮಾಡಿ ಹಗ್ಗ ಹಿಡಿದು ದಡ ಸೇರಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.