Advertisement
ಮಲೆನಾಡಿನಲ್ಲಿ ನಿರಂತರ ಮಳೆಗೆ ತುಂಗಾ, ಭದ್ರಾ, ಹೇಮಾವತಿ, ವರದಾ, ಮಾಲತಿ, ಕುಮದ್ವತಿ, ಶರಾ ವತಿ, ಗಂಗಾವಳಿ, ಅಘನಾಶಿನಿ, ಕಾಳಿ ನದಿಗಳ ಆರ್ಭಟ ಜೋರಾಗಿದೆ. ಮಹಾರಾಷ್ಟ್ರ ದಲ್ಲಿ ಮಳೆ ತಗ್ಗಿದ್ದರಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ನೀರಿನ ಮಟ್ಟ 2 ಅಡಿ ಇಳಿಕೆಯಾಗಿದೆ. ಮಲಪ್ರಭಾ, ಘಟಪ್ರಭಾ, ಪಂಚಗಂಗಾ ನದಿಗಳು ಯಥಾಸ್ಥಿತಿಯಲ್ಲಿವೆ. ಆಲ ಮಟ್ಟಿ, ಲಿಂಗನಮಕ್ಕಿ, ತುಂಗಾ, ಭದ್ರಾ, ಹಿಡಕಲ್ ಜಲಾಶಯಗಳ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ತಗ್ಗಿದ್ದರೆ, ಶಿವಮೊಗ್ಗದಲ್ಲಿ ಅಬ್ಬರಿಸುತ್ತಿದೆ. ಶಿವಮೊಗ್ಗ ಸಮೀಪದ ಗಾಜನೂರು ಜಲಾ ಶಯ ತುಂಬಿ ತುಂಗಾ ನದಿಗೆ 55 ಕ್ಯೂಸೆಕ್‌ಗಿಂತಲೂ ಹೆಚ್ಚು ನೀರು ಬಿಡುತ್ತಿರುವುದರಿಂದ ನದಿ ದಡ ದಲ್ಲಿರುವ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನದ ಜವಳದ ಕೊಠಡಿ, ನದಿ ದಡದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ, ಫತ್ತೆಪೂರ್ ಮಾರ್ಗವಾಗಿ ಉಕ್ಕಡಗಾತ್ರಿಗೆ ಹೋಗುವ ರಸ್ತೆ ಹಾಗೂ ನೂರಾರು ಎಕರೆ ಗದ್ದೆ, ತೋಟಗಳು ಮುಳುಗಡೆಯಾಗಿವೆ. ಶೃಂಗೇರಿ ಶಾರದಾದೇವಿ ದೇವ ಸ್ಥಾನದ ಸಮೀಪದ ಕಪ್ಪೆ ಶಂಕರ ಮುಳುಗಿದೆ. ನೆಮ್ಮಾರ್ ತೂಗು ಸೇತುವೆ ಕುಸಿದಿದ್ದು, 5-6 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ರಸ್ತೆಯ ಅಲ್ಲಲ್ಲಿ ಕುಸಿದಿದ್ದು ಜು. 22ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕುರುವಳ್ಳಿ-ಬಾಳೆಬೈಲು ಬೈಪಾಸ್ ರಸ್ತೆಯಲ್ಲಿ ಮತ್ತೆ ಭೂಕುಸಿತವಾಗಿದೆ.
Related Articles
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಹೆರಾಡಿ ಹೊಳೆಯಲ್ಲಿ ಅಪರಿಚಿತನ ಶವ ತೇಲಿ ಬಂದಿದೆ. ಗಂಗಾವಳಿ ನದಿಯ ಇನ್ನೊಂದು ದಡದಲ್ಲೂ ಭಾರೀ ಭೂಕುಸಿತ ಉಂಟಾಗಿದೆ. ಯಲ್ಲಾ ಪುರ ತಾಲೂಕಿನ ಜೋಗಾಳಕೆರೆ ಅಸ್ಲೆಕೊಪ್ಪ ದಲ್ಲಿ ಧರೆ ಕುಸಿಯುವ ಭೀತಿ ಹಿನ್ನೆಲೆ ಯಲ್ಲಿ ನಾಲ್ಕು ಕುಣಬಿ ಕುಟುಂಬವನ್ನು ಸ್ಥಳಾಂತರಿಸಲಾಗಿದೆ.
Advertisement
ತಗ್ಗಿದ ಉತ್ತರದ ನೆರೆ ಭೀತಿಮಹಾರಾಷ್ಟ್ರದಲ್ಲಿ ಮಳೆ ತಗ್ಗಿದ್ದ ರಿಂದ ಕೃಷ್ಣಾ, ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ 2 ಅಡಿ ಇಳಿಕೆಯಾಗಿದ್ದು ಸದ್ಯ ನೆರೆ ಭೀತಿ ದೂರವಾಗಿದೆ. 19 ತಾಲೂಕಿನ ಶಾಲಾ, ಕಾಲೇಜುಗಳಿಗೆ ಇಂದು ರಜೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ದಾಂಡೇಲಿ, ಯಲಾ Éಪುರ, ಜೋಯಿಡಾ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸ ನಗರ, ತೀರ್ಥಹಳ್ಳಿ, ಸಾಗರ, ಸೊರಬ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ತಾಲೂ ಕಿನ ಶಾಲಾ-ಕಾಲೇಜುಗಳಿಗೆ ಜು. 18ರಂದು ರಜೆ ಘೋಷಿಸಲಾಗಿದೆ. ಗುಡ್ಡ ಕುಸಿತ: 2ನೇ ದಿನವೂ ಕಾರ್ಯಾಚರಣೆ
ಕಾರವಾರ: ಇಲ್ಲಿನ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬಿದ್ದಿರುವ ಅಪಾರ ಪ್ರಮಾಣದ ಮಣ್ಣು ತೆರವು ಕಾರ್ಯಾಚರಣೆ ಬುಧವಾರವೂ ಮುಗಿದಿಲ್ಲ. ಈ ದುರಂತ ಸಂಭವಿಸಿ 48 ತಾಸುಗಳೇ ಕಳೆಯುತ್ತ ಬಂದರೂ ಮಣ್ಣಿನ ರಾಶಿ ತೆರವು ಮಾಡುವುದೇ ಸವಾಲಾಗಿ ಪರಿಣಮಿಸಿದೆ. ನಿರಂತರ ಸುರಿಯುತ್ತಿರುವ ಮಳೆ ಹಾಗೂ ಪಕ್ಕದ ಗುಡ್ಡ ಮತ್ತಷ್ಟು ಕುಸಿಯುವ ಭೀತಿ ಕಾರ್ಯಾಚರಣೆಗೆ ತೊಡಕಾಗಿವೆ. 4 ಜೆಸಿಬಿಗಳನ್ನು ಬಳಸಿ ಮಣ್ಣು ತೆರವು ಮಾಡಲಾಗುತ್ತಿದ್ದು, ಕಾರವಾರ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಹೆದ್ದಾರಿ ಬಂದ್ ಆಗಿರುವ ಕಾರಣ ಕುಮಟಾ-ಅಂಕೋಲಾ ಮಧ್ಯೆ ವಾಹನ ಸಂಚಾರ ಸ್ಥಗಿತವಾಗಿದೆ. ಅಂಕೋಲಾದಿಂದ ಹಿಚRಡತನಕ ಹೆದ್ದಾರಿ ಬದಿಗೆ ವಾಹನಗಳು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿವೆ. ಬಹುತೇಕ ಗುರುವಾರ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನಾರಂಭದ ಸಾಧ್ಯತೆಗಳಿವೆ. ಮೃತರ ಸಾಮೂಹಿಕ ಅಂತ್ಯಕ್ರಿಯೆ
ಅಂಕೋಲಾ: ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟಿದ್ದ ಒಂದೇ ಕುಟುಂಬದ ಮೂವರ ಸಾಮೂಹಿಕ ಅಂತ್ಯಕ್ರಿಯೆ ಸ್ವಗ್ರಾಮ ಶಿರೂರಿನಲ್ಲಿಯೇ ನಡೆಯಿತು. ಚಹಾ ಅಂಗಡಿ ಮಾಲಿಕ ಲಕ್ಷ್ಮಣ ನಾಯ್ಕ, ಈತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಅವರ ಮೃತದೇಹ ದುಬ್ಬನಸಸಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿತ್ತು. ಬಳಿಕ ಗೋಕರ್ಣ ಸರಕಾರಿ ಆಸ್ಪತ್ರೆ ಸಾಗಿಸಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಧಾರ್ಮಿಕ ವಿ ಧಿ-ವಿಧಾನ ಬಳಿಕ ಮೃತದೇಹಗಳನ್ನು ಶಿರೂರಿನ ರುದ್ರಭೂಮಿಗೆ ತಂದಿದ್ದು, ಅಲ್ಲಿ ಲಕ್ಷ್ಮಣ ನಾಯ್ಕ ಸಹೋದರ ಮಂಜುನಾಥ ನಾಯ್ಕ ಅಗ್ನಿಸ್ಪರ್ಶ ಮಾಡಿದರು. ಲಕ್ಷ್ಮಣ ನಾಯ್ಕ ಮತ್ತು ಪತ್ನಿ ಶಾಂತಿ ನಾಯ್ಕ ಮೃತದೇಹವನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನಡೆಸಲಾಯಿತು. ದುರಂತದಲ್ಲಿ ಲಕ್ಷ್ಮಣ ನಾಯ್ಕರ ಪುತ್ರಿ ಅವಂತಿಕಾ ನಾಯ್ಕ ಹಾಗೂ ಸಂಬಂಧಿ ಜಗನ್ನಾಥ ನಾಯ್ಕ ಕೂಡ ಮೃತಪಟ್ಟಿದ್ದು, ಅವರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶಿರೂರು ಸಮೀಪದ ಹಳಕೇರಿ, ಹೊನ್ನಹಳ್ಳಿ ಬಳಿಯೂ ಗುಡ್ಡ ಕುಸಿತ
ಅಂಕೋಲಾ: ಶಿರೂರಿನಲ್ಲಿ ಗುಡ್ಡ ಕುಸಿದು ಭೀಕರ ದುರಂತ ಸಂಭವಿಸಿದ ಬೆನ್ನಲ್ಲೇ ಅಗಸೂರಿನ ಹಳಕೇರಿ ಹಾಗೂ ಹೊನ್ನಹಳ್ಳಿ ಬಳಿ ಗುಡ್ಡ ಏಕಾಏಕಿ ಕುಸಿಯಲು ಆರಂಭಿಸಿದ್ದು 20ಕ್ಕೂ ಹೆಚ್ಚು ಕುಟುಂಬಗಳಿಗೆ ಆತಂಕ ಮೂಡಿಸಿದೆ. ಅಂಕೋಲಾ ತಾಲೂಕು ಕೇಂದ್ರದಿಂದ 17 ಕಿಮೀ ದೂರದ ಅಗಸೂರು ಬಳಿಯ ಹಳಕೇರಿ ಗುಡ್ಡದ ಮೇಲ್ಭಾಗ ಏಕಾಏಕಿ ಕುಸಿಯುತ್ತಿದೆ. ಆದರೆ ಹಳಕೇರಿ ಗುಡ್ಡದ ಕೆಳಭಾಗದಲ್ಲಿ ಇನ್ನೊಂದು ಗುಡ್ಡವಿದ್ದು ಕುಸಿದು ಬಂದ ಗುಡ್ಡದ ಮಣ್ಣನ್ನು ನಿಯಂತ್ರಿಸಬಹುದು ಎನ್ನಲಾಗುತ್ತಿದೆ. 5ರಿಂದ 6 ಎಕರೆ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದೆ. ಇನ್ನೊಂದೆಡೆ ಹೊನ್ನಹಳ್ಳಿ ಬಳಿಯೂ ಗುಡ್ಡ ಕುಸಿಯುತ್ತಿದ್ದು 15ಕ್ಕೂ ಹೆಚ್ಚು ಕುಟುಂಬಗಳು ಆತಂಕಕ್ಕೀಡಾಗಿವೆ. ಜಿಪಿಎಸ್ ನೀಡಿದ ಸುಳಿವು: ಗುಡ್ಡ ಕುಸಿತದ ಮಣ್ಣಿನಡಿ ಲಾರಿ-ಚಾಲಕ!
ಅಂಕೋಲಾ: ಶಿರೂರು ಗುಡ್ಡ ಕುಸಿತದಡಿ ಲಾರಿಯೊಂದು ಸಿಲುಕಿರುವುದು ಜಿಪಿಎಸ್ ಲೋಕೇಶನ್ ಮೂಲಕ ತಿಳಿದು ಬಂದಿದ್ದು, ಲಾರಿ ಚಾಲಕ ಅರ್ಜುನ ಕೂಡ ಕಣ್ಮರೆಯಾಗಿದ್ದಾನೆ. ಈತನನ್ನು ಹುಡುಕಿ ಕೊಡುವಂತೆ ಅರ್ಜುನ ಅವರ ಸಹೋದರ ಅಭಿಜಿತ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಜೋಯಿಡಾ ರಾಮನಗರದ ಜಗಲಪೇಟದಿಂದ ಕಟ್ಟಿಗೆ ತುಂಬಿದ್ದ 12 ಚಕ್ರದ ಲಾರಿ ಕೇರಳಕ್ಕೆ ತೆರಳುತ್ತಿತ್ತು. ಲಾರಿ ಚಾಲಕ ಅರ್ಜುನ ಶಿರೂರು ಹೆದ್ದಾರಿ ಪಕ್ಕದಲ್ಲಿದ್ದ ಹೊಟೇಲ್‌ನಲ್ಲಿಯೇ ಚಹಾ ಕುಡಿದು ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಜಿಪಿಎಸ್ ಲೋಕೇಶನ್ ಆಧರಿಸಿ ನೋಡಿದರೆ ಲಾರಿ ಗುಡ್ಡ ಕುಸಿತದ ಮಣ್ಣಿನಡಿಯಲ್ಲಿರುವುದು ಕಂಡು ಬರುತ್ತಿದ್ದು ಚಾಲಕ ಅಲ್ಲಿಯೇ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಎಚ್ಚರಿಕೆ ವಹಿಸಿ: ಸಚಿವ ಕುಮಾರಸ್ವಾಮಿ
ಬೆಂಗಳೂರು: ಶಿರೂರು ಬಳಿ ಹೆದ್ದಾರಿ ಕುಸಿತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿ ಹಲವರು ಸಾವನ್ನಪ್ಪಿರುವ ಘಟನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಈಗಾಗಲೇ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತ ನಾಡಿದ್ದು ಪರಿಹಾರ ಕಾರ್ಯ, ಮೃತರ ಕುಟುಂಬ ಗಳಿಗೆ ನೆರವು ಇತ್ಯಾದಿ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿದು ಬಿದ್ದು ಅದರೊಳಗೆ ಸಿಲುಕಿ ಮೃತ ಪಟ್ಟವರನ್ನು ಹೊರ ತೆಗೆಯಲು ಕೇಂದ್ರ ಸರಕಾರ ಎನ್‌ಡಿಆರ್‌ಎಫ್ ತಂಡ ನಿಯೋಜಿ ಸಿದ್ದು, ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಬೇಕು.
– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ