Advertisement

Thrissur: ಹೊಸ ವರ್ಷಕ್ಕೆ ವಿಶ್‌ ಮಾಡದ್ದಕ್ಕೆ ಯುವಕನಿಗೆ 24 ಬಾರಿ ಚೂರಿ ಇರಿತ

05:00 PM Jan 01, 2025 | Team Udayavani |

ತ್ರಿಶೂರ್:‌ ಹೊಸ ವರ್ಷಕ್ಕೆ ಶುಭಕೋರದ ಕಾರಣ ವ್ಯಕ್ತಿಯೊಬ್ಬ ಯುವಕನಿಗೆ ಹಿಗ್ಗಾಮುಗ್ಗಾವಾಗಿ ಚೂರಿ ಇರಿದ ಘಟನೆ ಕೇರಳದ ತ್ರಿಶೂರಿನ ಮುಳ್ಳೂರ್ಕರದಲ್ಲಿ ಬುಧವಾರ(ಜ.1 ರಂದು) ನಡೆದಿರುವುದು ವರದಿಯಾಗಿದೆ.

Advertisement

ಕೇರಳದ ಅತ್ತೂರಿನ ನಿವಾಸಿ ಶುಹೈಬ್ (22 ರಂದು) ಗಾಯಗೊಂಡ ಯುವಕ. ಶಾಫಿ ಚೂರಿ ಇರಿದ ಆರೋಪಿ.

ಘಟನೆ ಹಿನ್ನೆಲೆ: ಹೊಸ ವರ್ಷದ ಪ್ರಯುಕ್ತ ಮ್ಯೂಸಿಕ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಹೈಬ್‌ ಹಾಗೂ ಅವನ ನಾಲ್ವರು ಗೆಳೆಯರು ಬೈಕ್‌ನಲ್ಲಿ ವಾಪಾಸ್‌ ಆಗುತ್ತಿದ್ದರು. ಈ ವೇಳೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಫಿ ಹಾಗೂ ಅವನ ಸ್ನೇಹಿತರು ಶುಹೈಬ್‌ ಮತ್ತು ಆತನ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ಇದಕ್ಕೆ ಶುಹೈಬ್‌ ಮತ್ತು ಸ್ನೇಹಿತರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೇ ಕಾರಣದಿಂದ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ. ಶಾಫಿ ಶುಹೈಬ್‌ ಮೇಲೆ ಹಲ್ಲೆ ನಡೆಸಿ 24 ಬಾರಿ ಚೂರಿಯಿಂದ ಇರಿದಿದ್ದಾನೆ. ಶುಹೈಬ್‌ ತೋಳು ಹಾಗೂ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು,ಪ್ರಸ್ತುತ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿ ತಿಳಿಸಿದೆ.

ಆರೋಪಿ ಶಾಫಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು ಆತನ ವಿರುದ್ಧಕೇರಳ ಸಾಮಾಜಿಕ ವಿರೋಧಿ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ (KAAPA) ಅಡಿಯಲ್ಲಿ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು.

Advertisement

ಶಾಫಿ ಗಾಂಜಾ ಪ್ರಕರಣದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next