Advertisement
ಎಲ್ಲೆಲ್ಲಿ ಏನಾಗಿದೆ?ಕೊಲ್ಲಾಪುರ: ಕರ್ನಾಟಕದ ಗಡಿಭಾಗಕ್ಕೆ ಸಮೀಪದಲ್ಲಿರುವ ಕೊಲ್ಲಾಪುರದಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದರಿಂದ, ಪಂಚಗಂಗಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿದೆ. ಗುರುವಾರ ಸಂಜೆಗೇ ರಾಜಾರಾಮ್ ಅಣೆಕಟ್ಟೆಯ ನೀರಿನಮಟ್ಟ 31.1 ಅಡಿಗೆ ಮುಟ್ಟಿದೆ. ಅಪಾಯದಮಟ್ಟ 39 ಅಡಿ. ಮಳೆ ಹೀಗೆಯೇ ಮುಂದುವರಿದರೆ ಅಲ್ಲಿ ವಿಪ್ಲವ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ. ಕಳೆದ 24 ಗಂಟೆಗಳಲ್ಲಿ ಈ ಜಿಲ್ಲೆಯಲ್ಲಿ 104.3 ಎಂಎಂ ಮಳೆಯಾಗಿದೆ. ಗಂಗನ್‌ಬಾವಾx ತಾಲೂಕಿನಲ್ಲಿ ಗರಿಷ್ಠ 182.7 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲಾಡಳಿತದ ಪ್ರಕಾರ ಜಿಲ್ಲೆಯ 58 ಅಣೆಕಟ್ಟುಗಳು ಮುಳುಗಿವೆ.
ಪುಣೆ ನಗರದ ಖಡಕ್‌ಮಲ್ ಅಲಿ ಪ್ರದೇಶದಲ್ಲಿನ ಹಳೆಯಕಾಲದ (ವಾಡೆ) ಭಾರೀ ಮನೆಯೊಂದರ ಗೋಡೆಗಳು ಗುರುವಾರ ಸಂಜೆ ಕುಸಿದಿವೆ. ಪರಿಣಾಮ ಮಹಿಳೆ ಸೇರಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಸಾವು ಸಂಭವಿಸಿಲ್ಲ.
ಥಾಣೆ: ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ ಕಟ್ಟಡವೊಂದು ಉರುಳಿಬಿದ್ದಿದೆ. ಇದುವರೆಗಿನ ಮಾಹಿತಿ ಪ್ರಕಾರ ಸಾವುನೋವುಗಳು ವರದಿಯಾಗಿಲ್ಲ. ಇನ್ನು ಮುಲುಂದ್ ಪ್ರದೇಶದಲ್ಲಿ ಗೋಡೆಯೊಂದು ಕುಸಿದು 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪಾಲ^ರ್: ಪಾಲ^ರ್‌ನ ವಿರಾರ್‌ನಲ್ಲಿ ಭಾರೀ ಮಳೆಯಿಂದಾಗಿ ಮೇಯುತ್ತಿದ್ದ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಅಗ್ನಿಶಾಮಕದಳ ಎರಡನ್ನು ಬಚಾವ್ ಮಾಡಿದೆ.
Related Articles
ಮುಂಬೈನಲ್ಲಂತೂ ಮಳೆ ಸತತವಾಗಿ ಸುರಿಯುತ್ತಿದೆ. ವಾರಾಂತ್ಯದವರೆಗೂ ಹೀಗೆಯೇ ಮಳೆ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಬೀಸತೊಡಗಿವೆ. ಅದರ ಪರಿಣಾಮ ದಕ್ಷಿಣ ಕರ್ನಾಟಕದ ಸಮುದ್ರತೀರದಿಂದ ಮಳೆಮಾರುತಗಳು ಉತ್ತರ ಕೇರಳದ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕೊಂಕಣ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಮುಂದಿನೆರಡು ದಿನ ಭಾರೀ ಮಳೆಯಾಗಲಿದೆ. ಈ ರಾಜ್ಯದ ಥಾಣೆ, ಪಾಲ್ಘಾರ್, ರಾಯಗಡಗಳು ಭಾರೀ ಮಳೆಯ ಭೀತಿಯಲ್ಲಿವೆ.
Advertisement