ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಬೆಳ್ಳಂದೂರು ಐಟಿ ವಲಯ ಸೇರಿದಂತೆ ನಗರದ ಪೂರ್ವ, ದಕ್ಷಿಣ ಮತ್ತು ಮಧ್ಯ ಭಾಗದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯ ಸೂಚನೆ ನೀಡಿದೆ. ಇನ್ನೂ ಮೂರು ದಿನಗಳ ಕಾಲ ಇದು ಮುಂದುವರಿಯಲಿದೆ ಎಂದು ತಿಳಿಸಿದೆ.
ತಗ್ಗು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ತೆರೆದ ಮ್ಯಾನ್‌ಹೋಲ್ ಗಳಿಗೆ ನೀರು ಹರಿಯುತ್ತದೆ. ನೆಲಮಾಳಿಗೆಯ ಪಾರ್ಕಿಂಗ್ ಗಳು ಮುಳುಗಡೆಯಾಗಿದ್ದು, ಹಲವೆಡೆ ವಾಹನಗಳು ಹಾನಿಗೊಳಗಾಗಿವೆ. ಸಂಜೆ 7.30 ರ ಸುಮಾರಿಗೆ ಮಳೆ ಪ್ರಾರಂಭವಾದ ಕಾರಣ ಮೆಟ್ರೋ ನಿಲ್ದಾಣಗಳಲ್ಲಿ ಜನರು ಆಶ್ರಯ ಪಡೆದ ದೃಶ್ಯಗಳು ಕಂಡು ಬಂತು.
ಇದನ್ನೂ ಓದಿ:“ಭೂತಕೋಲ’ : ನಟ ಚೇತನ್ ಹೇಳಿಕೆಗೆ ದಯಾನಂದ ಕತ್ತಲಸಾರ್ ತೀವ್ರ ಆಕ್ಷೇಪ
ಭಾರೀ ಮಳೆಯಿಂದಾಗಿ ಮೆಜೆಸ್ಟಿಕ್ ಬಳಿ ಗೋಡೆ ಕುಸಿದು ರಸ್ತೆಯಲ್ಲಿ ನಿಂತಿದ್ದ ಹಲವು ವಾಹನಗಳು ಜಖಂಗೊಂಡಿವೆ.