Advertisement

ಕರಾವಳಿಯಾದ್ಯಂತ ಉತ್ತಮ ಮಳೆ

12:03 PM Apr 16, 2018 | Harsha Rao |

ಮಂಗಳೂರು/ಉಡುಪಿ: ಕರಾವಳಿಯ ವಿವಿಧೆಡೆ ರವಿವಾರ ಬೆಳಗ್ಗೆ ಮತ್ತು ಸಂಜೆ ಉತ್ತಮ ಮಳೆಯಾಗಿದೆ.
ಮಂಗಳೂರು ನಗರ ಮತ್ತು ಪುತ್ತೂರಿನಲ್ಲಿ ಬೆಳಗ್ಗೆ ಸುಮಾರು ಎರಡು ತಾಸು ಮಳೆಯಾಗಿದೆ. ಸುರತ್ಕಲ್‌, ಕೋಟೆಕಾರು, ತಲಪಾಡಿ,ಕಿನ್ನಿಗೋಳಿ, ಕುಂಜೂರು, ಶಿರ್ವ, ಬಂಟ್ವಾಳ, ಮೂಲ್ಕಿ, ವಿಟ್ಲ, ಪಡುಬಿದ್ರಿ, ವೇಣೂರು, ಸುಬ್ರಹ್ಮಣ್ಯ, ಕಡಬ, ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳ ಸಹಿತ ನಗರದ ನಾನಾ ಕಡೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ವಿದ್ಯುತ್‌ ಕೈಕೊಟ್ಟಿತ್ತು. ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ-ಮಳೆಯಾಗಿದ್ದು, ಮರ್ಧಾಳ ಸರಕಾರಿ ಶಾಲೆಯ ಆವರಣ ಗೋಡೆ ಕುಸಿದಿದೆ. ಬೆಳ್ತಂಗಡಿಯ ಬಂಗಾಡಿ ಬೆದ್ರಬೆಟ್ಟಿನಲ್ಲಿ ನವೀಕರಣಗೊಂಡು ಉದ್ಘಾಟನೆಯಾದ ಮರಿಯಾಂಬಿಕಾ ಚರ್ಚಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಡಚಣೆಯಾಯಿತು.

Advertisement

ಉಡುಪಿ ಜಿಲ್ಲೆಯ ತೆಕ್ಕಟ್ಟೆ, ಉಡುಪಿ, ಮಲ್ಪೆ, ಬ್ರಹ್ಮಾವರ, ಕುಂಜಾಲು, ಆರೂರುಗಳಲ್ಲಿ ಮಳೆಯಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿರಲಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ಕ್ರೀಡಾಕೂಟಕ್ಕೆ ಅಡ್ಡಿ
ಮಡಿಕೇರಿ:
ಮಡಿಕೇರಿಯಲ್ಲಿ  ಕೊಡವ ಕ್ರೀಡಾಕೂಟ ಕುಲ್ಲೇಟಿರ ಕಪ್‌ ಹಾಕಿ ಉತ್ಸವಕ್ಕೆ ಗಾಳಿ-ಮಳೆ ಅಡ್ಡಿ ಉಂಟು ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next