Advertisement

Mangaluru ಸಂಜೀವಿನಿ ಮಾಸಿಕ ಸಂತೆ ಖಾಯಂ ಆಗಿಸಲು ಕ್ರಮ: ಜಿಲ್ಲಾ ಪಂಚಾಯತ್‌ ಸಿಇಒ ಆನಂದ್‌

12:16 AM Sep 06, 2024 | Team Udayavani |

ಮಂಗಳೂರು: ಸಂಜೀವಿನಿ ಮಾಸಿಕ ಸಂತೆಯು ಜನಸಾಮಾನ್ಯರನ್ನು ತಲುಪಲು ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಸೂಪರ್‌ ಮಾರ್ಕೆಟ್‌ನ ಪರಿಕಲ್ಪನೆಯತೆ ಅಂಗಡಿಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆನಂದ್‌ ಕೆ. ಹೇಳಿದರು.

Advertisement

ಜಿ.ಪಂ., ಮಂಗಳೂರು ತಾಲೂಕು ಪಂಚಾಯತ್‌, ಕೌಶಲಾ ಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವ ನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವ ನೋಪಾಯ ಸಂವರ್ಧನಾ ಸಂಸ್ಥೆ ಇದರ ಸಹಯೋಗದೊಂದಿಗೆ ಮಂಗಳೂರು ತಾಲೂಕು ಪಂಚಾಯತ್‌ ಆವರಣದಲ್ಲಿ ಗುರುವಾರ ಜರಗಿದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಒಕ್ಕೂಟದಿಂದ ಪ್ರತಿ ತಿಂಗಳು ನಡೆಯುವ ಮಾಸಿಕ ಸಂತೆ ತಾತ್ಕಾಲಿಕವಾಗಿ ರಲಿದೆ. ಖಾಯಂ ಆಗಿ ನಡೆಯಲು ಅಂಗಡಿ ನಿರ್ಮಿಸಲು ಮುಂದಿನ 2 ತಿಂಗಳೊಳಗೆ ಜನಸಂದಣಿ ಇರುವಂತಹ ಸೂಕ್ತ ಜಾಗಗಳನ್ನು ಗುರುತಿಸಲಾಗುವುದು. ಜಿಲ್ಲೆಯಲ್ಲಿರುವ ಸಂಜೀವಿನಿ ಒಕ್ಕೂಟದ ಎಲ್ಲ ಉತ್ಪನ್ನಗಳನ್ನು ಒಂದೇ ಕಡೆ ಮಾರಾಟಕ್ಕೆ ಲಭ್ಯವಾಗು ವಂತೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 200ಕ್ಕಿಂತಲೂ ಅಧಿಕ ಉತ್ಪನ್ನಗಳನ್ನು ಸಂಜೀವಿನಿ ಒಕ್ಕೂಟದವರು ಉತ್ಪಾದಿಸುತ್ತಿದ್ದಾರೆ. ಅವುಗಳಿಗೆ ಮಾರುಕಟ್ಟೆಯ ಅಭಾವ ಕಾಡುತಿದ್ದು ಇತ್ತೀಚಿಗೆ ಮೀಶೋ ಆನ್‌ಲೈನ್‌ ಆ್ಯಪ್‌ ಮೂಲಕವೂ ಸಂಜೀವಿನಿ ಉತ್ಪನ್ನಗಳು ಮಾರಾಟವಾಗುತ್ತಿದ್ದು ಇನ್ನಷ್ಟು ಮಾರುಕಟ್ಟೆಗಳು ಇಂತಹ ಉತ್ಪನ್ನಗಳಿಗೆ ಸಿಗಬೇಕು ಎಂದರು.

ಉತ್ಪನ್ನವು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಅದರಲ್ಲಿ ವಿಭಿನ್ನ ತರಬೇಕು. ಉತ್ಪನ್ನದ ಗುಣಮಟ್ಟ ಮತ್ತು ಅದನ್ನು ಗ್ರಾಹಕರಿಗೆ ನೀಡುವಾಗ ಉತ್ತಮ ಪ್ಯಾಕೆಜಿಂಗ್‌ ಹೊಂದಿರಬೇಕು ಎಂದರು. ಸಂಜೀ ವಿನಿ ಒಕ್ಕೂಟದ ಸದಸ್ಯ ರಿಂದ ಅನೇಕ ಉತ್ಪನ್ನಗಳನ್ನು ಸ್ಥಳದಲ್ಲೇ ಮಾರಾಟ ಮಾಡಲಾಯಿತು. ತಾ.ಪಂ. ಕಾರ್ಯನಿರ್ವಹಣಾಧಿ ಕಾರಿ ಮಹೇಶ್‌ ಹೊಳ್ಳ, ಮಹೇಶ್‌, ಸಂಜೀವಿನಿ ತಾ. ಪಂ. ಮೂಲ್ಕಿ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಮಂಗಳೂರು ತಾ.ಪಂ.ಸ. ನಿರ್ದೇಶಕ ಮಹೇಶ್‌ ಮತ್ತಿರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next