Advertisement

Mangaluru ನಗರ ಪೊಲೀಸ್‌ಗೆ ಅತ್ಯಾಧುನಿಕ ಡ್ರೋನ್‌

12:33 AM Sep 04, 2024 | Team Udayavani |

ಮಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡಿ ನಾಗರಿಕರಿಗೆ ಸುರಕ್ಷತೆಯನ್ನು ಒದಗಿಸುವ ಉದ್ದೇಶದಿಂದ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಿಂದ ಮಂಗಳೂರು ನಗರ ಪೊಲೀಸರಿಗೆ ಅತ್ಯಾಧುನಿಕವಾದ “ಐಡಿಯಾ ಫೋರ್ಜ್‌ಡ್‌ ಕ್ಯು 6′ ಡ್ರೋನ್‌ನನ್ನು ಮಂಗಳವಾರದಂದು ನೀಡಲಾಯಿತು.

Advertisement

ಈ ಡ್ರೋನ್‌ ಅನ್ನು ನಗರದಲ್ಲಿ ಕಾನೂನು ಸುವ್ಯವಸ್ಥೆ, ಸಂಚಾರ ವ್ಯವಸ್ಥೆಯ ಮೇಲೆ ನಿಗಾ ಇಡಲು, ಪ್ರತಿಭಟನೆ, ವಿವಿಧ ರೀತಿಯ ಆಚರಣೆಗಳ ಸಂದರ್ಭ ಬಳಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ 7 ಮಂದಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.