Advertisement
ಈ ವೇಳೆ ಗಾಳಿಯಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆ.31ರಂದು ಆರೆಂಜ್ ಅಲರ್ಟ್ ಮತ್ತು ಸೆ.1, 2ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗಂಟೆಗೆ 35ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಇರುವುದರಿಂದ ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
Advertisement
ಮಂಗಳೂರಿನಲ್ಲಿ 28.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕಗಿಂತ 0.6 ಡಿ.ಸೆ. ಕಡಿಮೆ ಮತ್ತು 23 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಉಷ್ಣಾಂಶ ಕಡಿಮೆ ಇತ್ತು.
ಉಡುಪಿಯಲ್ಲಿ ಆ.31ರಂದು ಭಾರೀ ಮಳೆ?: ರೆಡ್ ಅಲರ್ಟ್ಉಡುಪಿ ಜಿಲ್ಲೆಯಲ್ಲಿ ಆ.31ರಂದು ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ
ರೆಡ್ ಅಲರ್ಟ್ ಘೋಷಿಸಿದೆ. ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಇನ್ನು ಉಡುಪಿ, ದ.ಕ, ಉ.ಕನ್ನಡ, ಚಿಕ್ಕಮಗ ಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಶುಕ್ರವಾರ ಆರೆಂಜ್ ಅಲರ್ಟ್ ಘೋಷಿ ಸಲಾಗಿದೆ. 30-40 ಕಿ.ಮೀ. ಸಹಿತ ನಿರಂತರ ಗಾಳಿ ಬೀಸುವ ಸಾಧ್ಯತೆಗಳಿವೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಡಿ. ಸೆ. ಮತ್ತು 20 ಡಿ.ಸೆ. ಆಗಿರಬಹುದು.