Advertisement
ಹಾಗಾದರೆ ಬನ್ನಿ ನಾವಿಂದು ನಿಮಗಾಗಿ ತುಂಬಾನೇ ಮೃದುವಾಗಿರುವ ಗೋಧಿ ಹಿಟ್ಟಿನ ಲಡ್ಡು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು. ಗೋಧಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಗೋಧಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು -2 ಕಪ್,ಸಕ್ಕರೆ ಪುಡಿ – 2 ಕಪ್,ಏಲಕ್ಕಿ ಪುಡಿ – 1 ಟೀಸ್ಪೂನ್,ತುಪ್ಪ -7 ರಿಂದ8 ಚಮಚ,ಗೋಡಂಬಿ – 8-10,ಒಣದ್ರಾಕ್ಷಿ – 10. ತಯಾರಿಸುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ ನಂತರ ಅದಕ್ಕೆ 2 ಕಪ್ ನಷ್ಟು ಗೋಧಿ ಹಿಟ್ಟು ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಈ ಮಿಶ್ರಣವು ಗೋಲ್ಡನ್ ಬ್ರೌನ್ ಬರುವ ತನಕ ಹುರಿಯಿರಿ, ನಿಮಗೆ ಆಹ್ಲಾದಕರ ಪರಿಮಳವನ್ನು ನೀಡಲು ಪ್ರಾರಂಭಿಸುತ್ತದೆ. ಆಗ ಇನ್ನೊಂದು ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.ತದನಂತರ ಈ ಮಿಶ್ರಣಕ್ಕೆ 2 ಕಪ್ ಸಕ್ಕರೆ ಪುಡಿ,ಸ್ವಲ್ಪ ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.ನಂತರ ತುಪ್ಪದಲ್ಲಿ ಹುರಿದಿಟ್ಟುಕೊಂಡ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹಾಕಿ ಕಲಸಿ ಉಂಡೆ ಕಟ್ಟಿದರೆ ಗೋಧಿ ಹಿಟ್ಟಿನ ಲಡ್ಡು ರೆಡಿ.ಇದು ತುಂಬಾನೇ ಮೃದು ಹಾಗೆಯೇ ರುಚಿಯೂ ಅದ್ಭುತ.ನೀವು ಸಹ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ…
Related Articles
Advertisement