Advertisement
ಇದೇ ಬಸ್ಗಳು ಕುಂದಾಪುರ ಹಾಗೂ ಉಡುಪಿಯಿಂದ ಬೆಂಗಳೂರಿಗೆ ಸಂಚರಿಸಲಿವೆ. ಅಗತ್ಯ ಬಿದ್ದಲ್ಲಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಉಡುಪಿ ವಿಭಾಗದ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.
ಕುಂದಾಪುರ: ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರ ಭಾಗಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಕುಂದಾಪುರ ರೈಲು ಹಿತರಕ್ಷಣ ಸಮಿತಿ ಮತ್ತು ಉತ್ತರ ಕನ್ನಡ ರೈಲು ಸಮಿತಿಯು ಮನವಿ ಸಲ್ಲಿಸಿತ್ತು. ಈ ರೈಲು ನ. 3ರಂದು ಅಪರಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು 12.50 ಕುಮಟ, ಅಪರಾಹ್ನ 2.40ಕ್ಕೆ ಕುಂದಾಪುರದಿಂದ ಹೊರಟು, ಮಧ್ಯಾಹ್ನ 3.30 ಉಡುಪಿ, ಪಡೀಲ್ ಬೈಪಾಸ್ ಮೂಲಕ ಬೆಂಗಳೂರನ್ನು ಸೋಮವಾರ ಬೆಳಗಿನ ಜಾವ 4ಕ್ಕೆ ತಲುಪಲಿದೆ.