Advertisement

ಆರೋಗ್ಯಕರ ಸಮಾಜಕ್ಕೆ ಕುಟುಂಬ ವೈದ್ಯರ ಸಲಹೆ ಅಗತ್ಯ

02:07 PM Oct 21, 2017 | |

ಮಹಾನಗರ: ವೈದ್ಯಕೀಯ ರಂಗದಲ್ಲಿ ನಿರ್ದಿಷ್ಟ ವಿಷಯಗಳ ಕುರಿತು ಪರಿಣತಿ ಪಡೆದು ರೋಗಿಗಳಿಗೆ ಉತ್ತಮ ಚಿಕಿತ್ಸೆ ಸೌಲಭ್ಯ ದೊರಕುತ್ತಿದ್ದರೂ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಕುಟುಂಬ ವೈದ್ಯರ ಪಾತ್ರ ಇಂದಿಗೂ ಮಹತ್ವದ್ದು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಪ್ರೊ| ಎಚ್‌. ಎಸ್‌. ಬಲ್ಲಾಳ್‌ ಹೇಳಿದರು.

Advertisement

ಅವರು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಕೆಎಂಸಿ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. 

ಆಧುನಿಕ ವೈದ್ಯವಿಜ್ಞಾನ ಎಷ್ಟೇ ಬೆಳೆದರೂ ಮೂಲಭೂತವಾಗಿ ರೋಗ ಪತ್ತೆ ಮಾಡುವಲ್ಲಿ ಕುಟುಂಬ ವೈದ್ಯರ ಪಾತ್ರ ಮಹತ್ವದ್ದಾಗಿದೆ. ಎಷ್ಟೋ ರೋಗಗಳಿಗೆ ಚಿಕಿತ್ಸೆಗಿಂತ ಹೆಚ್ಚಾಗಿ ರೋಗಿಗಳಲ್ಲಿ ಧೈರ್ಯ ತುಂಬುವುದು ಮತ್ತು ರೋಗಿಗಳಿಗೆ ಮಾನಸಿಕ ಬೆಂಬಲ ನೀಡುವುದು ಅಗತ್ಯವಾಗುತ್ತದೆ. ಇಂಥ ಕೆಲಸವನ್ನು ಕುಟುಂಬ ವೈದ್ಯರು ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎಂದರು.

ಕುಟುಂಬ ವೈದ್ಯರು ಸಾಮಾನ್ಯವಾಗಿ ರೋಗಿಯ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ, ಕುಟುಂಬ ಸದಸ್ಯರ ಆರೋಗ್ಯ ಹಿನ್ನೆಲೆ ಮತ್ತಿತರ ಮಹತ್ವದ ಅಂಶಗಳನ್ನು ತಿಳಿದು ಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ವೈದ್ಯರನ್ನು ಸಂಪರ್ಕಿಸದೆ ನೇರವಾಗಿ ವಿಶೇಷ ತಜ್ಞರ ಸಲಹೆಯನ್ನು ಪಡೆಯುವುದು ಕೆಲವೊಮ್ಮೆ ಆರೋಗ್ಯ ಸಂಕೀರ್ಣತೆಗಳಿಗೂ ಕಾರಣವಾಗಬಹುದು ಎಂದು ಎಚ್ಚರಿಸಿದರು.

ಚಿಕಿತ್ಸಾ ದಾಖಲೆಗಳನ್ನೂ ಸಮರ್ಪಕವಾಗಿ ನಿರ್ವಹಿಸಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ವೈದ್ಯರು ಮತ್ತು ಆಸ್ಪತ್ರೆಗಳು ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸುವ ಜತೆಗೆ, ಚಿಕಿತ್ಸಾ ದಾಖಲೆಗಳಲ್ಲೂ ಸಮರ್ಪಕವಾಗಿ ನಿರ್ವಹಿಸುವುದು ಅನಿವಾರ್ಯ. ಕೆಪಿಎಂಇ ಕಾಯ್ದೆ, ಗ್ರಾಹಕ ಹಕ್ಕುಗಳ ಕಾಯ್ದೆ ಮತ್ತಿತರ ಕಾಯ್ದೆಗಳ ಅನ್ವಯ ಇದು ಕಡ್ಡಾಯವಾಗಿದೆ ಎಂದರು.

Advertisement

ಮಂಗಳೂರು ಕೆಎಂಸಿ ಡೀನ್‌ ಡಾ| ಎಂ.ವಿ. ಪ್ರಭು, ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್‌ ಅತಿಥಿಗಳಾಗಿ ಆಗಮಿಸಿದ್ದರು. ಮಂಗಳೂರು ಐಎಂಎ ಅಧ್ಯಕ್ಷ ಡಾ| ರಾಘವೇಂದ್ರ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ತಜ್ಞರಾದ ಡಾ| ಚಕ್ರಪಾಣಿ, ಡಾ| ಅರ್ಜುನ್‌ ಶೆಟ್ಟಿ, ಡಾ| ಮನೀಶ್‌, ಡಾ| ಪ್ರವೀಣ್‌ಚಂದ್ರ ನಾಯಕ್‌, ಡಾ| ಯೋಗೀಶ್‌ ಕಾಮತ್‌, ಡಾ| ವಿ.ಬಿ.ತಂತ್ರಿ, ಡಾ| ಶಿವಾನಂದ ಪೈ, ಡಾ| ಪ್ರಹ್ಲಾದ್‌ ಕುಷ್ಟಗಿ, ಡಾ| ಕೀರ್ತಿರಾಜ್‌, ಡಾ| ಕೃಷ್ಣಪ್ರಸಾದ್‌ ಮೊದಲಾದವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಮಂಗಳೂರು ಐಎಂಎ ಕಾರ್ಯದರ್ಶಿ ಡಾ| ಕದ್ರಿ ಯೋಗೀಶ್‌ ಬಂಗೇರ, ಖಜಾಂಚಿ ಡಾ| ಜಿ.ಕೆ.ಭಟ್‌ ಸಂಕಬಿತ್ತಿಲು, ನಿಯೋಜಿತ ಅಧ್ಯಕ್ಷ ಡಾ|ಕೆ.ಆರ್‌.ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next