Advertisement

ಹುತಾತ್ಮ ದಿನಾಚರಣೆಗೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಸಚಿವನ ವಾಪಸ್‌ ಕಳಿಸಿದ ಪೊಲೀಸರು

01:17 PM Jan 18, 2021 | Team Udayavani |

ಚಿಕ್ಕೋಡಿ: ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬರುತ್ತಿದ್ದ ಮಹಾರಾಷ್ಟ್ರ ರಾಜ್ಯದ ಆರೋಗ್ಯ ಸಚಿವ
ರಾಜೇಂದ್ರ ಯಡ್ರಾಂವಕರ ಅವರನ್ನು ನಿಪ್ಪಾಣಿ ಪೊಲೀಸರು ರಾಜ್ಯದ ಗಡಿಯ ಕೊಗನ್ನೋಳ್ಳಿ ಚೆಕ್‌ಪೋಸ್ಟ್‌ ಬಳಿ ತಡೆದು ವಾಪಸ್‌ ಕಳಿಸಿದ ಘಟನೆ ರವಿವಾರ ನಡೆಯಿತು.

Advertisement

ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿ ಹಾಗೂ ನಿಪ್ಪಾಣಿಯಲ್ಲಿ ಹುತಾತ್ಮ ದಿನಾಚರಣೆ ಆಚರಣೆಗೆ ಬರುತ್ತಿದ್ದ ಮಹಾರಾಷ್ಟÅ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಂದ್ರ ಶಾಮರಾವ್‌ ಯಡ್ರಾವಕರ ಅವರನ್ನು ಮುನ್ನೆಚ್ಚರಿಕೆ
ಕ್ರಮವಾಗಿ ಕರ್ನಾಟಕ ಪೊಲೀಸರು ನಿಪ್ಪಾಣಿ ಬಳಿ ಕೋಗನೋಳಿ ಟೋಲ್‌ ನಾಕಾ ಬಳಿ ರವಿವಾರ ತಡೆದು ವಾಪಸ್‌ಕಳಿಸಿದ್ದಾರೆ. ಜ.17 ರಂದು ಪ್ರತಿ ವರ್ಷ ದಂತೆ ಹುತಾತ್ಮ ದಿನಾಚರಣೆ ಮಾಡಲು ಇವರೆಲ್ಲ ನಿಪ್ಪಾಣಿ ಮೂಲಕ ಬೆಳಗಾವಿಗೆ ಬರುತ್ತಿದ್ದರು. ಇವರನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೊಲೀಸರು ತಡೆದು ವಾಪಸ್‌ ಕಳಿಸಿದ್ದಾರೆ. ಸಚಿವರ ಜೊತೆಯಲ್ಲಿದ್ದ ಸುಮಾರು
30ಕ್ಕೂ ಹೆಚ್ಚು ಜನರು ಬೆಳಗಾವಿ, ಕಾರವಾರ್‌, ನಿಪ್ಪಾಣಿ, ಬೀದರ್‌, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಘೋಷಣೆ ಕೂಗಿದರು. ಕರ್ನಾಟಕ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ವಾಪಸ್‌ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿದರು.

ಇದನ್ನೂ ಓದಿ:ಜ.26ರ ರೈತರ ಟ್ರ್ಯಾಕ್ಟರ್ Rally ಅನುಮತಿ ಬಗ್ಗೆ ದೆಹಲಿ ಪೊಲೀಸರು ನಿರ್ಧರಿಸಲಿ: ಸುಪ್ರೀಂ

Advertisement

Udayavani is now on Telegram. Click here to join our channel and stay updated with the latest news.

Next