Advertisement

ಹೀರೆ ಬಗ್ಗೆ ನಿಮಗೆಷ್ಟು ಗೂತ್ತು…ರುಚಿಗೂ, ಆರೋಗ್ಯಕ್ಕೂ ಹೀರೇಕಾಯಿ !

02:41 PM Jun 09, 2020 | mahesh |

ಆಹಾರ ತುಂಬಾ ರುಚಿಯಾಗಿದ್ದು ನಾಲಿಗೆ ಚಪಲ ತೀರಿದರೆ ಅಷ್ಟೇ ಸಾಕು ಎನ್ನುವುದು ಸಾಮಾನ್ಯ ಯೋಚನೆಯಾಗಿದೆ. ಆದರೆ ನಾವು ತಿನ್ನುವ ಎಷ್ಟೋ ಆಹಾರದಲ್ಲಿ ಅಗತ್ಯ ಪೋಷಕಾಂಶ ಇದೆಯೇ ಇಲ್ಲವೇ ಎನ್ನುವುದನ್ನು ಕೂಡ ಅರಿಯುವುದಿಲ್ಲ. ರುಚಿಗೂ ಆರೋಗ್ಯಕ್ಕೂ ಆದ್ಯತೆ ನೀಡುವ ನೆಲೆಯಲ್ಲಿ ಹೀರೇಕಾಯಿ ತರಕಾರಿ ಪ್ರಧಾನ ಪಾತ್ರವಹಿಸುತ್ತದೆ.

Advertisement

ದೇಹದ ತೂಕ ಇಳಿಕೆಗೆ
ಹೀರೇಕಾಯಿಯಲ್ಲಿ ಅಧಿಕ ಐರನ್‌, ಮ್ಯಾಗ್ನಿ ಷಿಯಂ, ವಿಟಮಿನ್‌ ಸಿ ಅಂಶವು ಹೇರಳವಾಗಿದ್ದು ಹಲವು ರೋಗಗಳಿಗೆ ಇದು ಮನೆಮದ್ದಾಗಿದೆ. ಇದರ ನಿಯಮಿತ ಸೇವನೆಯೂ ದೇಹದ ಅನಗತ್ಯ ಕೊಬ್ಬಿನಾಂಶವನ್ನು ಹೊರಹಾಕಿ ನಮ್ಮ ಫಿಟ್‌ನೆಸ್‌ ಕಾಪಾಡುತ್ತದೆ. ದೇಹದ ತೂಕ ಇಳಿಕೆಗೆ ಇದರ ಸೇವನೆ ಮಾಡುವುದು ಉತ್ತಮವಾಗಿದೆ. ಇದನ್ನು ಉಪ್ಪಿನಲ್ಲಿ ಬೇಯಿಸಿ ಇಲ್ಲವೇ ಜ್ಯೂಸ್‌ ರೂಪದಲ್ಲೂ ಸೇವಿಸಬಹುದು. ಆದರೆ ಪಲ್ಯ ಇನ್ನಿತರ ಖಾದ್ಯ ಮಾಡುವಾಗ ಎಣ್ಣೆಯ ಅಂಶವನ್ನು ಕಡಿಮೆ ಬಳಸುವುದನ್ನು ರೂಢಿಸಿಕೊಳ್ಳಬೇಕು.

ಲಿವರ್ ನ ಆರೋಗ್ಯ ಕಾಪಾಡುವುದು
ಲಿವರ್ ನ ಆರೋಗ್ಯ ಕಾಪಾಡುವುದಲ್ಲದೆ, ಮದ್ಯಪಾನದಿಂದ ಲಿವರ್ ಮೇಲಾಗುವ ಕೆಟ್ಟ ಪರಿಣಾಮಗಳನ್ನು ದೂರ ಮಾಡುವ ಗುಣ ಹೊಂದಿದೆ. ಅಲ್ಲದೆ ಲಿವರ್ ಗೆ ಸಂಬಂಧಿಸಿದಂತೆ ಬರುವ ಹಳದಿ ಪಿತ್ತ ಅಥವಾ ಜಾಂಡೀಸ್ ಖಾಯಿಲೆ ಇರುವವರು ಇದರ ಜ್ಯೂಸ್ ಮಾಡಿ ರಸ ಸೇವಿಸಬೇಕು.

ಉರಿ ಮೂತ್ರ ಸಮಸ್ಯೆ ನಿವಾರಿಸಲು
ದೇಹದಲ್ಲಿ ಕಡಿಮೆನೀರಿನಂಶ ಉರಿಮೂತ್ರ ಸಮಸ್ಯೆಗೆ ಕಾರಣವಾಗಿದ್ದು ಅಂತಹ ಸಂದರ್ಭದಲ್ಲಿ ಹೀರೇಕಾಯಿ ಸೇವನೆ ಒಳ್ಳೆಯದು. ಇದರಲ್ಲಿರುವ ವಿಟಮಿನ್‌, ನೀರಿನಂಶ ಉರಿಮೂತ್ರದ ನೋವಿನ ಬಾಧೆ ಕಡಿಮೆ ಮಾಡುತ್ತದೆ. ಇದನ್ನು ಜೀರಿಗೆ, ಕಲ್ಲು ಸಕ್ಕರೆ, ಗಸಗಸೆಯೊಂದಿಗೆ ಬೆರೆಸಿ ಅರೆದು ಸೇವಿಸುವುದರಿಂದ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿದೆ.

ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ
ಹೀರೇಕಾಯಿಯಲ್ಲಿ ಕೆರೋಟಿನ್‌ ಅಂಶವಿದ್ದು ಇದು ನಿಮ್ಮ ರಕ್ತ ಶುದ್ಧೀಕರಿಸಲು ನೆರವಾಗುತ್ತದೆ. ಮಾತ್ರವಲ್ಲದೆ ಇದರಲ್ಲಿರುವ ಅಧಿಕ ನೀರಿನಂಶ ವು ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ವಾರಕ್ಕೆ 3ರಿಂದ ನಾಲ್ಕು ಬಾರಿ ಕಡಿಮೆ ಮಸಾಲ ಅಂಶವನ್ನು ಉಪಯೋಗಿಸಿ ಅಡುಗೆ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗುತ್ತದೆ.

Advertisement

ಸಿಬ್ಬಿನ ನಿವಾರಣೆಗೆ
ಸಿಬ್ಬಿನ ಸಮಸ್ಯೆಗೆ ಇದೊಂದು ಉತ್ತಮ ಮದ್ದಿನಂತೆ ಕಾರ್ಯ ನಿರ್ವಹಿಸುತ್ತದೆ. ಹೀರೇಕಾಯಿ ಸಿಪ್ಪೆ ಅಧಿಕ ಪೋಷಕಾಂಶವನ್ನು ಹೊಂದಿದ್ದು ಅದನ್ನು ಬೆಳ್ಳುಳ್ಳಿ ಮತ್ತು ಚಿಟಿಕೆ ಉಪ್ಪಿನೊಂದಿಗೆ ಪೇಸ್ಟ್‌ ಮಾಡಿ ವಾರಕ್ಕೆ ನಾಲ್ಕು ಬಾರಿ ಲೇಪಿಸುವುದರಿಂದ ಸಿಬ್ಬಿನ ಒಣಾಂಶವು ಕಡಿಮೆಯಾಗಿ ತ್ವಚೆಯ ಹೊಳಪು ಹೆಚ್ಚಲು ಸಹಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next