ಹೊನ್ನಾಳಿ: ತಾಲೂಕಿನ ಬಲಮುರಿ, ಗೋಪಗೊಂಡನಹಳ್ಳಿ, ಸೋಮನಮಲ್ಲಾಪುರ ತಾಂಡಾ, ಹೊಸಕಟ್ಟೆ ಗ್ರಾಮಗಳಲ್ಲಿ ಮಲೇರಿಯಾ, ಡಂಘೀ, ಚಿಕೂನ್‌ಗುನ್ಯಾ, ಕುಷ್ಟ ರೋಗಿಗಳಿದ್ದು, ಆರೋಗ್ಯದ ಅರಿವು ಮೂಡಿಸಲಾಗುತ್ತಿದೆ ಎಂದು ಸ್ವಚ್ಛಗ್ರಾಮ ಅಭಿಯಾನ ಮತ್ತು ನೈರ್ಮಲ್ಯ ಆರೋಗ್ಯ ಅರಿವು ಆಂದೋಲನ ಕಾರ್ಯಕ್ರಮದ ಪ್ರಮುಖ ಡಾ| ಕೆ.ಬಿ. ಶೇಖರ್ ಹೇಳಿದರು.
ಚಿಕ್ಕೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ಸ್ವಚ್ಛ ಗ್ರಾಮ ಅಭಿಯಾನ ಮತ್ತು ನೈರ್ಮಲ್ಯ ಆರೋಗ್ಯ ಅರಿವು ಆಂದೋಲನ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.
ಗಾಂಧಿ ಜಯಂತಿ ದಿನದಂದು ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ತಾಲೂಕಿನ 22 ಗ್ರಾಮಗಳಲ್ಲಿ ನಂದಿಗುಡಿ ಬ್ರಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗ್ರಾಮಗಳಲ್ಲಿ ಪಾದಯಾತ್ರೆ ಬಗ್ಗೆ ವ್ಯಾಪಕ ಬೆಂಬಲ ಹಾಗೂ ಆದರದ ಸ್ವಾಗತ ದೊರೆಯುತ್ತಿದೆ ಎಂದರು.
ಹರಿಹರ ತಾಲೂಕು ನಂದಿಗುಡಿ ಮಹಾ ಸಂಸ್ಥಾನದ ಲಿಂ| ಹಿರಿಯ ಗುರುಗಳವರ ಸಂಸ್ಮರಣೆ ಪ್ರಯಕ್ತ ಈ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೆ 5 ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಅ. 7ರಂದು ಮಾದೇನಹಳ್ಳಿ, ಕತ್ತಿಗೆ, ಜೀನಹಳ್ಳಿ, ಗುಡ್ಡೇಹಳ್ಳಿ, ಹೊಸಕೊಪ್ಪ,, ಬೆಳಗುತ್ತಿ, ಮಲ್ಲಗೇನಹಳ್ಳಿ, ರಾಮೇಶ್ವರ, ಯರಗನಾಳ್ ಗ್ರಾಮಗಳಲ್ಲಿ ಹಾಗೂ ಅ. 14ರಂದು ಆರುಂಡಿ, ಕೆಂಚಿಕೊಪ್ಪ, ಸೊರಟೂರು, ತುಗ್ಗಲಹಳ್ಳಿ, ಎಚ್. ಕಡದಕಟ್ಟೆ, ಹಿರೇಕಲ್ಮಠ ಗ್ರಾಮಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಂದಿಗುಡಿ ಬ್ರಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯಸ್ವಾಮಿಜಿ ನೇತೃತ್ವವಹಿಸಿದ್ದರು. ಡಾ| ಗುರುಶಾಂತಯ್ಯ, ಡಾ| ವೇದಮೂರ್ತಿ, ಡಾ| ಸಿದ್ದನಗೌಡ, ಉಪನ್ಯಾಸಕ ಉಮೇಶ್, ಸಾಹಿತಿ ಕತ್ತಿಗೆ ಚನ್ನಪ್ಪ, ನಿವೃತ್ತ ಉಪನ್ಯಾಸಕ ಹುಡೇದ್, ನಿವೃತ್ತ ನೌಕರ ಸೋಮಸುಂದರ ಇದ್ದರು.