Advertisement
ಈ ಹಿಂದಣ ಸರ್ವವ್ಯಾಪಿ ಸಾಂಕ್ರಾಮಿಕಗಳು : ವೈಬ್ರಿಯೊ ಕೊಲೆರೇ ಬ್ಯಾಕ್ಟೀರಿಯಾ ಸೋಂಕಿನಿಂದ ಕಾಲರಾ ಉಂಟಾಗುತ್ತದೆ. 1817ರಿಂದೀಚೆಗೆ ಕಾಲರಾ ಸರ್ವವ್ಯಾಪಿ ಸೋಂಕಾಗಿ ಏಳು ಬಾರಿ ಏಶ್ಯಾ ಮತ್ತು ಇತರ ಖಂಡಗಳಲ್ಲಿ ಹಾವಳಿ ಉಂಟು ಮಾಡಿದೆ. ಏಳನೆಯ ಕಾಲರಾ ಹಾವಳಿ 1961ರಲ್ಲಿ ಆರಂಭವಾಗಿ ಪ್ರತೀ ವರ್ಷ ಸುಮಾರು 30ರಿಂದ 50 ಲಕ್ಷ ಮಂದಿಯನ್ನು ಬಾಧಿಸಿತು, ಒಟ್ಟಾರೆಯಾಗಿ ಸುಮಾರು 1,20,000 ಮಂದಿ ಮೃತಪಟ್ಟರು. 1991ರಲ್ಲಿ ದಕ್ಷಿಣ ಅಮೆರಿಕದಲ್ಲಿ ಮತ್ತೂಮ್ಮೆ ಕಾಲರಾ ತೀವ್ರವಾಗಿ ವ್ಯಾಪಿಸಲಾರಂಭಿಸಿತು ಹಾಗೂ ಅದು 1992ರಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿಯೂ ಕಂಡುಬಂತು. ಕಾಲರಾಕ್ಕೆ ಒಳಗಾದ ರೋಗಿಗಳ ನಿರ್ವಹಣೆಯು ದೇಹಕ್ಕೆ ತೀವ್ರವಾಗಿ ದ್ರವಾಂಶ ಪುನರ್‌ಸ್ಥಾಪನೆಯನ್ನು ಒಳಗೊಂಡಿರುತ್ತದೆ,
Related Articles
Advertisement
ಮೂರು ತಿಂಗಳುಗಳ ಒಳಗೆ ಫಿಲಿಪ್ಪೀನ್ಸ್, ಭಾರತ, ಆಸ್ಟ್ರೇಲಿಯಾ, ಯುರೋಪ್ ಮತ್ತು ಅಮೆರಿಕಗಳಿಗೂ ಹರಡಿತು. ಆದರೆ ಈ ಸರ್ವವ್ಯಾಪಿ ಸಾಂಕ್ರಾಮಿಕವು ತೌಲನಿಕವಾಗಿ ಕಡಿಮೆ ಮರಣ ಪ್ರಮಾಣ (ಶೇ.5) ಹೊಂದಿತ್ತಾದರೂ ಒಂದು ಮಿಲಿಯಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಇದರಲ್ಲಿ ಹಾಂಕಾಂಗ್‌ನ 5 ಲಕ್ಷ ಜನರು ಸೇರಿದ್ದು, ಇದು ಅಲ್ಲಿನ ಆಗಿನ ಜನಸಂಖ್ಯೆಯ ಶೇ.15 ಆಗಿತ್ತು. ಪ್ಲೇಗ್ ಮತ್ತು ಕಾಲರಾ: ತಡೆಗಾಗಿ ಸಾರ್ವಜನಿಕ ಕ್ರಮಗಳು ಐರೋಪ್ಯ ನಗರಗಳು ಜನದಟ್ಟಣೆ ಇರುವ ಕಡೆಗಳಲ್ಲಿ ನೈರ್ಮಲ್ಯ ಸ್ಥಿತಿಗತಿಗಳನ್ನು ಉತ್ತಮಪಡಿಸುವುದಕ್ಕಾಗಿ ಕ್ರಮಗಳನ್ನು ಕೈಗೊಂಡವು. ಕೊಳೆಗೇರಿಗಳ ನಿರ್ಮೂಲನೆ, ಒಳಚರಂಡಿ ವ್ಯವಸ್ಥೆಯ ದುರಸ್ತಿ ಮತ್ತು ಪುನಾರಚನೆ, ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಒದಗಣೆ ಇವುಗಳಲ್ಲಿ ಸೇರಿತ್ತು. 1897ರಲ್ಲಿ ವೆನಿಸ್ ನಗರವು ಸೋಂಕುಪೀಡಿತ ಪ್ರದೇಶಗಳಿಂದ ಹಡಗುಗಳಲ್ಲಿ ಆಗಮಿಸುವವರ ಕ್ವಾರಂಟೈನ್, ಸೋಂಕುಪೀಡಿತ ಪ್ರದೇಶಗಳಿಂದ ಹಡಗುಗಳ ಸಂಚಾರ ನಿಯಂತ್ರಣದಂತಹ ಕ್ರಮಗಳನ್ನು ವ್ಯಾಪಾರ ವ್ಯವಹಾರಗಳಿಗೆ ಅಡ್ಡಿಯಾಗದಂತೆ ಕೈಗೊಂಡಿತ್ತು. ಜತೆಗೆ ಯುರೋಪನ್ನು ಪ್ರವೇಶಿಸುವ ಹಡಗುಗಳು, ಪ್ರವಾಸಿಗರು, ಹಡಗು ಸಿಬಂದಿ ಮತ್ತು ಸರಕು ಸಾಮಗ್ರಿಗಳ ನೈರ್ಮಲ್ಯ ಸ್ಥಿತಿಯನ್ನು ಉತ್ತಮಪಡಿಸಲಾಯಿತು. ಹಡಗುಗಳ ನೈರ್ಮಲ್ಯ ಸ್ಥಿತಿಗತಿಯು ಅವುಗಳು ಯುರೋಪಿಗೆ ಆಗಮಿಸಿದಾಗ ಒಳಗಾಗುವ ನೈರ್ಮಲ್ಯ ವಿಧಿವಿಧಾನಗಳಿಗೆ ಸಮಾನವಾಗಿರಬೇಕು ಎಂದು ಸೂಚಿಸಲಾಯಿತು. ಸಮಾನವಾದ ಆಧುನಿಕ ಅಂತಾರಾಷ್ಟ್ರೀಯ ಪ್ರೊಫಿಲ್ಯಾಕ್ಸಿಸ್ ಕ್ರಮಗಳನ್ನು ರಚಿಸಿ ವಿವಿಧ ದೇಶಗಳ ಸರಕಾರಗಳಿಗೆ ಒದಗಿಸಿದ್ದರಿಂದ ರಸ್ತೆ ಮಾರ್ಗ ಮತ್ತು ಜಲಮಾರ್ಗದ ಮೂಲಕ ಆಗಮಿಸುವ ರೋಗವಾಹಕಗಳ ನಿಯಂತ್ರಣಕ್ಕೆ ನೂತನ ಕಾನೂನುಗಳನ್ನು ರೂಪಿಸಲು ಸಾಧ್ಯವಾಯಿತು.
ಕಾಲರಾ ತಡೆಯ ಗಮನಾರ್ಹ ಕ್ರಮಗಳಲ್ಲಿ ಜನಸಮುದಾಯದಲ್ಲಿ ನೈರ್ಮಲ್ಯ ಕ್ರಮಗಳನ್ನು ಉತ್ತಮಪಡಿಸುವುದು ಮತ್ತು ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುವಂತೆ ಮಾಡುವುದು ಸೇರಿದೆ. ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ವರ್ಧನೆಯು ಸಮುದಾಯಗಳಲ್ಲಿ ಈ ಬಗ್ಗೆ ಅರಿವು ಉಂಟು ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆಹಾರ ಸೇವನೆಗೆ ಮುನ್ನ ಅಥವಾ ಮಲವಿಸರ್ಜನೆಯ ಬಳಿಕ, ಅಡುಗೆ ಮಾಡುವುದಕ್ಕೆ ತೊಡಗುವ ಮುನ್ನ ಸಾಬೂನು ಬಳಸಿ ಕೈತೊಳೆದುಕೊಳ್ಳುವುದರಂತಹ ಮೂಲ ಮತ್ತು ಅತ್ಯಗತ್ಯವಾದ ನೈರ್ಮಲ್ಯ ಕ್ರಮಗಳಿಗೆ ಒತ್ತು ನೀಡುವುದು ಬಹಳ ಮುಖ್ಯ.
( ಮುಂದಿನ ವಾರಕ್ಕೆ)
– ಡಾ| ಸಬಾಹ್ ಶರಾಫ್ ಆಲಂ
ರಿಸರ್ಚ್ ಅಸಿಸ್ಟೆಂಟ್, ಕೆಎಂಸಿ, ಮಂಗಳೂರು