Advertisement
ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ್ ಹಾಗೂ ಟಿ.ಎನ್.ಜೀಶ್ ಅವರು, ಜ. 8ರಂದು ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಲಿದ್ದಾರೆ. ಈ ನಿಟ್ಟಿನಲ್ಲಿ ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಕ್ಸಲರು ಹಾಗೂ ರಾಜ್ಯ ಸರಕಾರದ ಜತೆ ನಡೆಸಿದ ಮಾತುಕತೆ ಸಫಲವಾಗಿದೆ ಎನ್ನಲಾಗಿದೆ.
Related Articles
Advertisement
ಜನಪರ ಹೋರಾಟ ನಿಲ್ಲದು: ಮುಂಡಗಾರು ಲತಾಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಆರು ಜನ ಮುಖ್ಯವಾಹಿನಿಗೆ ಬರಬೇಕೆಂದು ತೀರ್ಮಾನ ಮಾಡಿ ಎರಡು ಹಂತದ ಚರ್ಚೆ ನಡೆಸಿದ್ದೇವೆ ಎಂದು ಮುಂಡಗಾರು ಲತಾ ತಿಳಿಸಿದ್ದಾರೆ. ಸಮಿತಿಯವರು ಬಂದು ನಡೆದಿರುವ ಬೆಳವಣಿಗೆಗಳ ಬಗ್ಗೆ ತಿಳಿಸಿದ್ದಾರೆ. ಸಕಾರಾತ್ಮಕ ವಿಷಯಗಳು ಖುಷಿ ತಂದಿವೆ. ಎಲ್ಲ ಕಾಮ್ರೇಡ್ಗಳು ಕೂಡ ಸ್ವಾಗತಿಸುತ್ತೇವೆ ಹಾಗೂ ಜನರ ಮುಂದೆ ತೆಗೆದುಕೊಂಡು ಹೋಗಲು ಬಯಸುತ್ತೇವೆ. ನಮ್ಮ ಹಕ್ಕೊತ್ತಾಯಗಳನ್ನು ಸರಕಾರ ಈಡೇರಿಸುತ್ತದೆ ಎಂಬ ಭರವಸೆ ಇದೆ. ಜನರ ಪರವಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ನಮ್ಮ ಉಸಿರಿರುವವರೆಗೂ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ. ಸಂಧಾನಕಾರರು ಮತ್ತು ನಕ್ಸಲರ ಜತೆ ಫೋಟೋ ವೈರಲ್
ಚಿಕ್ಕಮಗಳೂರು: ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ ಎಂಬ ವದಂತಿ ನಡುವೆಯೇ ಅವರ ಜತೆ ನಡೆದ ಸಂಧಾನದ ಫೋಟೋಗಳು ವೈರಲ್ ಆಗಿವೆ. ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಮಂಗಳವಾರ ನಕ್ಸಲರ ಜತೆ ಅರಣ್ಯದಲ್ಲಿ ನಡೆಸಿದ್ದರೆನ್ನಲಾದ ಚರ್ಚೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನಕ್ಸಲರು ಹಾಗೂ ಸರಕಾರದ ಮಧ್ಯೆ ಸೇತುವಾಗಿರುವ ಈ ಸಂಧಾನಕಾರರು ನಡೆಸಿದ ಚರ್ಚೆ ವೇಳೆ ನಕ್ಸಲರು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸರಕಾರವೂ ಒಪ್ಪಿಗೆ ಸೂಚಿಸಿದೆ. ಹೀಗಾಗಿ ನಕ್ಸಲರ ಶರಣಾಗತಿಗೆ ವೇದಿಕೆ ಸಿದ್ಧವಾದಂತಾಗಿದೆ ಎಂದು ಹೇಳಲಾಗಿದೆ. ಶರಣಾಗತಿ ಹಾದಿ
ಈ ಹಿಂದೆ ಸರಕಾರ ಪ್ರಕಟಿಸಿದ್ದ ನಕ್ಸಲ್ ಶರಣಾಗತಿ ಪ್ಯಾಕೇಜ್ನಡಿ ಈಗಾಗಲೇ ಹಾಗಲಗಂಚಿ ವೆಂಕಟೇಶ್, ಮಲ್ಲಿಕಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ಪರಶುರಾಮ, ಭಾರತಿ, ಕನ್ಯಾಕುಮಾರಿ, ಶಿವು, ಚನ್ನಮ್ಮ ಸೇರಿದಂತೆ ಒಟ್ಟು 14 ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಈಗ ಮತ್ತೆ ಆರು ಮಂದಿ ಒಂದೇ ಬಾರಿಗೆ ಶರಣಾಗುತ್ತಿದ್ದಾರೆ. 3 ದಶಕಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ನಡೆದಿತ್ತು. ಈವರೆಗೆ 10-12 ಮಂದಿ ನಕ್ಸಲರು ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದರೆ; ನಕ್ಸಲರು ಕೂಡ ಪೊಲೀಸ್ ಬಾತ್ಮೀದಾರರು, ಪೊಲೀಸರು ಹಾಗೂ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಸರಕಾರಕ್ಕೆ 18 ಬೇಡಿಕೆಗಳ ಪಟ್ಟಿ
6 ಜನ ನಕ್ಸಲ್ ಹೋರಾಟಗಾರರು ಶರಣಾಗತಿ ಹೊಂದಿ ಮುಖ್ಯವಾಹಿನಿಗೆ ಮರಳುವ ಮುನ್ನ ಸುಮಾರು 18 ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ ಎನ್ನಲಾಗಿದೆ. 3 ರಾಜ್ಯದಲ್ಲಿ ಭೂಮಿ ಇಲ್ಲದ ಪ್ರತೀ ಕುಟುಂಬಕ್ಕೆ 5 ಎಕರೆ ಕೃಷಿ ಯೋಗ್ಯ ಭೂಮಿ ಕೊಡಬೇಕು. ಭೂಮಿ ಇರುವವರಿಗೆ ಶಾಶ್ವತ ಹಕ್ಕುಪತ್ರ ಕೊಡಬೇಕು. ಆದಿವಾಸಿಗಳಿಗೆ ಭೂಮಿ ಮತ್ತು ಶಾಶ್ವತ ಹಕ್ಕುಪತ್ರ ನೀಡಬೇಕು. ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂಹೀನರಿಗೆ ಹಂಚಬೇಕು. ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು. ಪಶ್ಚಿಮ ಘಟ್ಟದಲ್ಲಿ ಪ್ರವಾಸೋದ್ಯಮಕ್ಕಾಗಿ ಪರಿಸರ ನಾಶ ನಿಲ್ಲಿಸಬೇಕು. ನಿರುದ್ಯೋಗಿ ಯುವ ಜನಾಂಗಕ್ಕೆ ಅವರ ಅರ್ಹತೆಗೆ ತಕ್ಕಂತೆ ಸರಕಾರಿ ಉದ್ಯೋಗ ಕೊಡಬೇಕು, ಮುಖ್ಯವಾಹಿನಿಗೆ ಬಂದ 15 ದಿನಗಳೊಳಗೆ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ. ಯಾರ್ಯಾರು ಶರಣಾಗತಿ?
ಮುಂಡಗಾರು ಲತಾ
ಸುಂದರಿ ಕುತ್ಲೂರು
ವನಜಾಕ್ಷಿ ಬಾಳೆಹೊಳೆ
ಮಾರಪ್ಪ ಅರೋಲಿ
ಕೆ. ವಸಂತ್
ಟಿ.ಎನ್. ಜೀಶ್