ಮದುರೈ : ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಕಾಮಾಂಧ ಮುಖ್ಯ ಶಿಕ್ಷಕನೊಬ್ಬ ಸಿಕ್ಕ ಸಿಕ್ಕ ಹುಡುಗಿಯರಿಗೆ ಕಿರುಕುಳ ನೀಡಿ ಇದೀಗ 55 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ. ಇಷ್ಟು ಸುದೀರ್ಘ ಶಿಕ್ಷೆ ನೀಡಿರುವು ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು ಎಂದು ತಿಳಿದು ಬಂದಿದೆ.
ಪೊದುಂಬು ಎಂಬ ತೀರಾ ಹಿಂದುಳಿದ ಹಳ್ಳಿಯ ಹೈಸ್ಕೂಲ್ ಮುಖ್ಯ ಶಿಕ್ಷ ಅರೋಕ್ಯಸಾಮಿ ಶಿಕ್ಷೆಗೆ ಗುರಿಯಾಗಿದ್ದು, ಈತ 22 ವಿದ್ಯಾರ್ಥಿನಿಯರು ಮಾತ್ರವಲ್ಲದೆ 91 ವಿದ್ಯಾರ್ಥಿಗಳಿಗೂ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ ಮೆರೆದಿದ್ದ.
ಈತನ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿದ್ದು, ಅಪರಾಧಿ ಎಂದು ನ್ಯಾಯಾಲಯ ಘೋಷಿಸಿ 55 ವರ್ಷಗಳ ಶಿಕ್ಷೆ ಮತ್ತು 3.4 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ದಂಡದ ಹಣವನ್ನು ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಹಂಚಬೇಕು ಎಂದು ವಿವೇಷ ಕೋರ್ಟ್ ಹೇಳಿದೆ.
ಕಮಾಂಧನ ಅಟ್ಟಹಾಸಕ್ಕೆ ಹಲವು ವಿದ್ಯಾರ್ಥಿನಿಯರು ನಲುಗಿ ಹೋಗಿದ್ದು ಯಾರೂ ದೂರು ನೀಡಲು ಮುಂದೆ ಬಂದಿರಲಿಲ್ಲ. ಹೀಗಾಗಿ ಆರೋಕ್ಯಸ್ವಾಮಿ ಕೆಟ್ಟ ಚಾಳಿ ಮುಂದುವರಿಸಿ ಸಿಕ್ಕ ಸಿಕ್ಕ ವಿದ್ಯಾರ್ಥಿನಿಯರ ಮೇಲೆ ಎರಗಿದ್ದಾನೆ. ಆದರೆ ಪಂಜು ಎಂಬ ವಿದ್ಯಾರ್ಥಿನಿ ಈತನ ಬಂಡವಾಳ ಬಯಲು ಮಾಡಿ ಜೈಲು ಪಾಲಾಗುವಂತೆ ಮಾಡಿದ್ದಾಳೆ. ದುರ್ದೈವವೆಂದರೆ ಆಕೆ ಇದೀಗ ಬದುಕುಳಿದಿಲ್ಲ.
ಈ ಪ್ರಕರಣ ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟು ವಿಶೇಷ ಕೋರ್ಟ್‌ಗೆ ವಹಿಸಲಾಗಿತ್ತು.