Advertisement

ಇಂದಿರಾ ಕ್ಯಾಂಟೀನ್‌ ಬಗ್ಗೆ ಆಸಕ್ತಿ ಇಲ್ಲ ಎಂದ ಹೋಟೆಲ್‌ ಸಂಘ

11:56 AM Apr 06, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ “ಇಂದಿರಾ’ಕ್ಯಾಂಟೀನ್‌ ನಿರ್ವಹಣೆ ಬಗ್ಗೆ ನಮಗೆ ಆಸಕ್ತಿಯಿಲ್ಲ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘ ತಿಳಿಸಿದೆ.ಇಂದಿರಾ ಕ್ಯಾಂಟೀನ್‌ಗೆ ಊಟ- ತಿಂಡಿ ಒದಗಿಸುವ ಕುರಿತು ಈ ಹಿಂದೆ ಇಸ್ಕಾನ್‌ ಜತೆ ಬಿಬಿಎಂಪಿ ಚರ್ಚಿಸಿತ್ತು.

Advertisement

ಆದರೆ, ಇಸ್ಕಾನ್‌ನವರು ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಇರುವುದರಿಂದ ಮತ್ತು ನಿರ್ವಹಣೆ ಕಷ್ಟವಿದ್ದುದರಿಂದ ಚರ್ಚೆ ಕೈಬಿಡಲಾಗಿತ್ತು. ಹೀಗಾಗಿ ಹೋಟೆಲ್‌ ಸಂಘದ ಪದಾಧಿಕಾರಿಗಳ ಸಭೆ ಕರೆದಿದ್ದ  ಬಿಬಿಎಂಪಿ ಆಯುಕ್ತರು ಹೊಟೇಲ್‌ ನಿರ್ವಹಣೆ ಬಗ್ಗೆ ಚರ್ಚಿಸಿದ್ದರು. ಆ ವೇಳೆ ಕ್ಯಾಂಟೀನ್‌ ನಿರ್ವಹಣೆ ಬಗ್ಗೆ ಪರಿಶೀಲಿಸುವುದಾಗಿ ಹೊಟೇಲ್‌ ಸಂಘದವರು ತಿಳಿಸಿದ್ದರು. ಆದರೆ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ ಹೆಬ್ಟಾರ್‌ ಹೇಳಿದ್ದಾರೆ. 

ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ ಬಳಿಕ ಸಂಘದ ಎಲ್ಲಾ ಸದಸ್ಯರಿಗೂ ಸಂದೇಶ ಕಳುಹಿಸಿ, ಕ್ಯಾಂಟೀನ್‌ ನಿರ್ವಹಣೆ ಬಗ್ಗೆ ಆಸಕ್ತಿ ಇದ್ದರೆ ತಿಳಿಸುವಂತೆ ಹೇಳಿದ್ದೆವು. ಆದರೆ, ಯಾವುದೇ ಸದಸ್ಯರೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಕ್ಯಾಂಟೀನ್‌ ನಿರ್ವಹಣೆ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬಿಬಿಎಂಪಿ ಈಗ ಪರ್ಯಾಯ ಅವಕಾಶಗಳನ್ನು ಹುಡುಕಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next