Advertisement

ಕೊಚ್ಚಿ ಹೋಗಲು ಸಿದ್ಧವಾಗಿದೆ ಮೋರಿ!

12:25 AM Jun 05, 2020 | Sriram |

ಉಡುಪಿ: ಕೊಡಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅಂಜಾರು, ಮಾಂಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆ ಕಾಮಗಾರಿ ಪೂರ್ಣಗೊಂಡ ಅಲ್ಪ ಅವಧಿಯಲ್ಲಿ ರಸ್ತೆಗೆ ಹಾಕಿದ ಮೋರಿ ಹಾಗೂ ರಸ್ತೆಯ ಒಂದು ಬದಿ ಜರಿದಿದೆ. ಮಳೆಗೆ ಲಕ್ಷ ರೂ. ವೆಚ್ಚದ ಕಾಮಗಾರಿ ಇಲ್ಲಿ ಮಳೆ ನೀರು ಪಾಲಾಗುತ್ತಿದೆ. ಅನುದಾನ ದೊರೆತರೂ ಪೂರ್ತಿ ಸಮಸ್ಯೆ ನಿವಾರಣೆಯಾಗಿಲ್ಲ.

Advertisement

ಅಂಜಾರು, ಮಾಂಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಕಳೆದ 6 ವರ್ಷಗಳಿಂದ ರಸ್ತೆ ಅಭಿವೃದ್ಧಿಗಳ ಬೇಡಿಕೆ ಇಡಲಾಗಿತ್ತು. ಕೊನೆಗೂ ಸ್ಥಳೀಯರ ಬೇಡಿಕೆಯಂತೆ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ 10 ಲಕ್ಷ ರೂ. ಅನುದಾನ ಒದಗಿಸಿದ್ದರು.

ಓಂತಿಬೆಟ್ಟು ಶಾಲೆ ಸಮೀಪ ದುರ್ಗಾ ಕಲ್ಯಾಣ ಮಂಟಪದ ಬಳಿಯಿಂದ ಜಬ್ಬ ಮೇಸ್ತ್ರಿಯವರ ಮನೆ ತನಕ ಸುಮಾರು 200 ಮೀ. ಗಳಷ್ಟು ದೂರದ ತನಕ ಕಾಂಕ್ರೀಟ್‌ ರಸ್ತೆ ನಿರ್ಮಾಣ ಹಾಗೂ ರಸ್ತೆ ಆರಂಭದ ಸ್ಥಳದಲ್ಲಿ ಮೋರಿ ಅಳವಡಿಕೆ ಕಾಮಗಾರಿ ನಡೆದಿತ್ತು. ಕಾಮಗಾರಿ ಎರಡು ತಿಂಗಳ ಹಿಂದೆ ಪೂರ್ಣಗೊಂಡು ಮಾರ್ಚ್‌ ತಿಂಗಳಲ್ಲಿ ಶಾಸಕರು ರಸ್ತೆಯನ್ನು ಉದ್ಘಾಟಿಸಿದ್ದರು.

ಸಮಸ್ಯೆ ಏನು?
ರಸ್ತೆ ಕಾಮಗಾರಿ ಆರಂಭಗೊಂಡ ಸ್ಥಳದಲ್ಲಿ ರಸ್ತೆಗೆ ಅಡ್ಡಲಾಗಿ ಮೋರಿ ಹಾಕಲಾಗಿದೆ. ಈ ಜಾಗ ಅಗಲ ಕಿರಿದಾಗಿದ್ದು, ತಗ್ಗು ಪ್ರದೇಶದಲ್ಲಿದೆ. ಇಲ್ಲಿ ಮೂರು ಮೋರಿ ಅಳವಡಿಸುವ ಬದಲು ಎರಡು ಮೋರಿ ಮಾತ್ರ ಹಾಕಲಾಗಿದೆ.

ಬೀದಿ ದೀಪಕ್ಕೂ ಬೇಡಿಕೆ
ರಸ್ತೆಯಲ್ಲಿ ರಾತ್ರಿ ಸಂಚರಿಸುವುದು ಅಪಾಯಕಾರಿ. ಈ ರಸ್ತೆಗೆ ಬೀದಿ ದೀಪ ಅಳವಡಿಸುವಂತೆ ಸ್ಥಳೀಯರು ಗ್ರಾ.ಪಂ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಹೆಚ್ಚಿನ ಅನುದಾನದ ಆವಶ್ಯಕತೆ

ಸಂಬಂಧಪಟ್ಟಂತೆ ಕಾಂಕ್ರೀಟ್‌ ರಸ್ತೆ ಉದ್ದವನ್ನು ಕಡಿಮೆಗೊಳಿಸದೆ ಎಲ್ಲ ಹಣವನ್ನು ಅದಕ್ಕೆ ಬಳಸಲಾಗಿದೆ. “ಯೂ” ಆಕೃತಿಯಲ್ಲಿ ಚರಂಡಿ ನಿರ್ಮಿಸಲು ಹೆಚ್ಚಿನ ಅನುದಾನದ ಆವಶ್ಯಕತೆಯಿರುತ್ತದೆ. ಅನುದಾನ ಸಿಕ್ಕಿದರೆ ಅದನ್ನು ಮಾಡಲು ಅಭ್ಯಂತರವಿಲ್ಲ ಎಂದು ಪಿಡಬ್ಲ್ಯುಡಿ ಎಂಜಿನಿಯರ್‌ ಸೋಮನಾಥ ಎನ್‌. ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next