ಇದೀಗ ತನ್ನ ಮಗ ಆರ್ಯವೀರ್ ಮತ್ತು ತನ್ನ ಬಾಲ್ಯದ ದಿನಗಳ ಫೋಟೋವೊಂದನ್ನು ಟ್ವೀಟರ್ನಲ್ಲಿ ಪ್ರಕಟಿಸಿದ್ದಾರೆ.
Advertisement
ಸೆಹ್ವಾಗ್ ಚಿಕ್ಕವರಾಗಿದ್ದಾಗ ಕನ್ನಡಕ ಧರಿಸಿಕೊಂಡು ಚಿತ್ರ ತೆಗೆಸಿಕೊಂಡಿದ್ದರು. ಇದನ್ನೇ ಈಗ ಆರ್ಯವೀರ್ ಅನುಕರಿಸಿದ್ದಾನೆ. ಅಂದು ಅಪ್ಪ ಧರಿಸಿದ್ದ ಕನ್ನಡಕ, ಭಂಗಿಯಲ್ಲೇ ನಿಂತು ಚಿತ್ರ ತೆಗೆಸಿಕೊಂಡಿದ್ದಾನೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವೀಕ್ಷಣೆಗೆ ಕಾರಣವಾಗಿದೆ. ಈ ಚಿತ್ರವನ್ನು ಪ್ರಕಟಿಸುವುದರೊಂದಿಗೆ ಒಂದು ಸಂದೇಶ ನೀಡಿದ್ದಾರೆ. ಅದು ಹೀಗಿದೆ: ನಮ್ಮ ಮಕ್ಕಳು ನಮ್ಮ ಬೋಧನೆಯನ್ನು ಅನುಕರಿಸುವುದಿಲ್ಲ, ಬದಲಿಗೆ ನಮ್ಮ ನಡತೆಯನ್ನು ಅನುಕರಿಸುತ್ತಾರೆ!